ಕರ್ನಾಟಕ

karnataka

ETV Bharat / elections

ಮತದಾನ ಕೇಂದ್ರದಲ್ಲಿ ಶೋಕ... ಹೃದಯಾಘಾತದಿಂದ ಇಬ್ಬರು ಅಧಿಕಾರಿಗಳ ಸಾವು - undefined

ಚಾಮರಾಜನಗರದ 48ನೇ ಬೂತ್​ನಲ್ಲಿ ಚುನಾವಣಾ ಕರ್ತವ್ಯ ಮೇಲಿದ್ದ ಎಸ್​. ಶಾಂತಮೂರ್ತಿ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು ಛತ್ತೀಸ್​ಗಢದಲ್ಲಿ ಸಹ ಚುನಾವಣೆ ಕರ್ತವ್ಯದ ಮೇಲೆ ನಿಯೋಜನೆಗೊಂಡಿದ್ದ ಶಾಲಾ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸಂಗ್ರಹ ಚಿತ್ರ

By

Published : Apr 18, 2019, 11:53 AM IST

Updated : Apr 18, 2019, 12:45 PM IST

ಬೆಂಗಳೂರು:ದೇಶಾದ್ಯಂತ ನಡೆಯುತ್ತಿರುವ ಎರಡನೇ ಹಂತದ ಮತದಾನದ ವೇಳೆ ಕರ್ತವ್ಯನಿರತ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.

ಚಾಮರಾಜನಗರದ 48ನೇ ಬೂತ್​ನಲ್ಲಿ ಚುನಾವಣಾ ಕರ್ತವ್ಯ ಮೇಲಿದ್ದ ಎಸ್​. ಶಾಂತಮೂರ್ತಿ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಛತ್ತೀಸ್​ಗಢದಲ್ಲಿ ಸಹ ಚುನಾವಣೆ ಕರ್ತವ್ಯದ ಮೇಲೆ ನಿಯೋಜನೆಗೊಂಡಿದ್ದ ಶಾಲಾ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಂಕರ್ ಲೋಕಸಭಾ ಕ್ಷೇತ್ರದ ಆಂತಗಢ್ ಪ್ರದೇಶದ ಕಾಮ್ತಾ ಬೂತ್ ನಂ.186 ಅಧಿಕಾರಿಯಾಗಿದ್ದ ತುಕಲು ರಾಮ್ ನರೇಟಿ ಎಂಬುವರು ಸರ್ಕಾರಿ ಶಾಲೆಯ ಸಹಾಯಕ ಶಿಕ್ಷಕರಾಗಿ ನೇಮಕಗೊಂಡಿದ್ದರು. ಇಂದು ಮತದಾನದ ಕರ್ತವ್ಯದಲ್ಲಿ ಇದ್ದಾಗಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಯಪುರ್ ಜಿಲ್ಲೆ ವ್ಯಾಪ್ತಿಯಲ್ಲಿ ನಕ್ಸಲ್ ಜಿಲ್ಲಾ ಮೀಸಲು ಕಾವಲು ಪಡೆ (ಡಿಆರ್​ಜಿ) ಅರಣ್ಯದಲ್ಲಿ ಬಿರುಸಿನ ಕೂಂಬಿಂಗ್ ನಡೆಸುತ್ತಿತ್ತು. ಈ ವೇಳೆ ಶಂಕಿತ ಇಬ್ಬರನ್ನು ಹೊಡೆದು ಉರುಳಿಸಲಾಗಿದೆ ಎಂದು ಸ್ಥಳೀಯ ಹಿರಿಯ ಪೊಲೀಸ ಅಧಿಕಾರಿ ತಿಳಿಸಿದ್ದಾರೆ.

Last Updated : Apr 18, 2019, 12:45 PM IST

For All Latest Updates

TAGGED:

ABOUT THE AUTHOR

...view details