ಕರ್ನಾಟಕ

karnataka

ಮಮತಾ ದೀದಿ ತವರಲ್ಲಿ ನೋಟಾದತ್ತ ದೃಷ್ಟಿ ನೆಟ್ಟ ಲೈಂಗಿಕ ಕಾರ್ಯಕರ್ತೆಯರು... ಕಾರಣವೇನು?

ಪಶ್ಚಿಮ ಬಂಗಾಳದಲ್ಲಿ ಸುಮಾರು 65,000 ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ. ಈ ಕಾರ್ಯಕರ್ತೆಯರು ಒಳಪಡುವ ಕ್ಷೇತ್ರಗಳಲ್ಲಿ ನೋಟಾ​ ಬಟನ್​ ಒತ್ತಿರಿ ಎಂದು ದರ್ಬಾರ್ ಮಹಿಳಾ ಸಮನ್ವಯ ಸಮಿತಿ (ಡಿಎಂಎಸ್​ಸಿ) ಒತ್ತಾಯಿಸಿದೆ.

By

Published : Apr 18, 2019, 9:18 AM IST

Published : Apr 18, 2019, 9:18 AM IST

ಸಾಂದರ್ಭಿಕ ಚಿತ್ರ

ಕೊಲ್ಕತ್ತಾ:ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಪಶ್ಚಿಮ ಬಂಗಾಳದ ಲೈಂಗಿಕ ಕಾರ್ಯಕರ್ತೆಯರು ತಮ್ಮ ಸಮುದಾಯದವರಿಗೆ ನೋಟಾ ಬಟನ್​ ಒತ್ತಿರಿ ಎಂದು ಆಗ್ರಹಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸುಮಾರು 65,000 ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ. ಈ ಕಾರ್ಯಕರ್ತೆಯರು ಒಳಪಡುವ ಕ್ಷೇತ್ರಗಳಲ್ಲಿ ನೋಟಾ​ ಬಟನ್​ ಒತ್ತಿರಿ ಎಂದು ದರ್ಬಾರ್ ಮಹಿಳಾ ಸಮನ್ವಯ ಸಮಿತಿ (ಡಿಎಂಎಸ್​ಸಿ) ಒತ್ತಾಯಿಸಿದೆ.

ಲೈಂಗಿಕ ಕಾರ್ಯಕರ್ತೆಯರನ್ನು ಕಾರ್ಮಿಕ ಕಾನೂನಿನಡಿ ತಂದು ಅವರಿಗೂ ಕಾಯ್ದೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇದುವರೆಗೂ ಯಾವುದೇ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ನೋಟಾ ಬಟನ್​ ಒತ್ತುವ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details