ನವದೆಹಲಿ:13 ರಾಜ್ಯಗಳಲ್ಲಿ 116 ಸ್ಥಾನಗಳಿಗೆ ಇವತ್ತು ನಡೆದ ಅತೀ ದೊಡ್ಡ ಮತದಾನದ ಹಂತದಲ್ಲಿ ಹೆಚ್ಚು ಶೇಕಡಾವಾರು ಮತದಾನ ಪ್ರಮಾಣ ದಾಖಲಾಗಿದೆ. ಮೂರನೇ ಹಂತದಲ್ಲಿ ಶೇ 64 ರಷ್ಟು ಮತದಾನವಾಗಿದ್ದು ಸಂಜೆ 7.30 ಗಂಟೆಯವರೆಗಿನ ಮಾಹಿತಿ ಪ್ರಕಾರ, ಅಸ್ಸಾಂನಲ್ಲಿ ಅತೀ ಹೆಚ್ಚು ಶೇ 80.70 ಮತದಾನವಾಗಿದೆ. ಇನ್ನು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ 66.34 ಎಂದು ಅಂದಾಜು ಮಾಡಲಾಗಿದೆ.
ಈ ಮೂಲಕ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ 302 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ. ಮುಂದಿನ ನಾಲ್ಕು ಹಂತಗಳಲ್ಲಿ ಶೇ 50 ರಷ್ಟು ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯಗಳಲ್ಲಿ ಶೇ.ಮತದಾನ ವಿವರ: (ಸಂಜೆ 7.30 ಗಂಟೆಯವರೆಗಿನ ಮಾಹಿತಿ)
ಇನ್ನುಳಿದಂತೆ, ಜಮ್ಮು ಕಾಶ್ಮೀರ- ಶೇ 12.86, ಗುಜರಾತ್‌ನಲ್ಲಿ ಶೇ 62.35, ಉತ್ತರ ಪ್ರದೇಶದಲ್ಲಿ ಶೇ60.16, ಮಹರಾಷ್ಟ್ರದಲ್ಲಿ ಶೇ 57.51, ಗೋವಾದಲ್ಲಿ ಶೇ 75.45, ಕೇರಳ ಶೇ 70.43, ಛತ್ತೀಸ್‌ಗಢ ಶೇ 68.25, ಒಡಿಶಾ ಶೇ.58.18, ಅಸ್ಸಾಂ ಶೇ 80.70, ಬಿಹಾರ ಶೇ 59.67 ಹಾಗು ತ್ರಿಪುರಾ ಶೇ 78.67, ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ (ಶೇ 71.43) , ದಮನ್ ಮತ್ತು ಡಿಯು (ಶೇ 65.34) ನಲ್ಲೂ ತಲಾ ಒಂದೊಂದು ಕ್ಷೇತ್ರಗಳಿಗೆ ಮತದಾನ ನಡೆದಿದೆ.