ರಾಯ್ಪುರ(ಛತ್ತೀಸ್ಗಡ):ಲೋಕಸಭಾ ಚುನಾವಣೆ ಬಿರುಸು ಪಡೆಯುತ್ತಿದ್ದು, ಇಲ್ಲೊಂದು ಕ್ಷೇತ್ರ ವಿಶೇಷ ಕಾರಣಕ್ಕೆ ದೇಶದಲ್ಲೇ ಗಮನ ಸೆಳೆಯುತ್ತಿದೆ.
ಮೊದಲ ಹಂತದ ಚುನಾವಣೆಯಲ್ಲಿ ಛತ್ತೀಸ್ಗಡದ ಬಸ್ತಾರ್ ಕ್ಷೇತ್ರದಲ್ಲಿ ಮಾತ್ರ ಮತದಾನ ನಡೆಯುತ್ತಿದ್ದು, ಈ ಏಕೈಕ ಕ್ಷೇತ್ರದಲ್ಲಿ ಏಳು ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು 80 ಸಾವಿರ ಭದ್ರತಾ ಸಿಬ್ಬಂದಿ ಬಿಗಿ ಬಂದೋಬಸ್ತ್ ನೀಡಿದ್ದಾರೆ.
ನಕ್ಸಲ್ ಪೀಡಿತ ಛತ್ತೀಸ್ಗಡದಲ್ಲಿ ಮಂಗಳವಾರದಂದು ದಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಭೀಕರ ದಾಳಿ ನಡೆಸಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದರು.