ನವದೆಹಲಿ:ಬಲೂನ್‌ಗಳಿಗೆ ಶ್ವಾನ ಕಟ್ಟಿ ಆಗಸದಲ್ಲಿ ಹಾರಿಬಿಡಲು ಪ್ರಯತ್ನಿಸಿದ ದೆಹಲಿ ಮೂಲದ ಗೌರವ್ ಝೋನ್ ಯೂಟ್ಯೂಬ್ ಚಾನಲ್ನ ಯೂಟ್ಯೂಬರ್ ಗೌರವ್ನನ್ನು ಬಂಧಿಸಲಾಗಿದೆ.
ಸಾಕು ಪ್ರಾಣಿಗಳನ್ನು ಗಾಳಿಯಲ್ಲಿ ತೇಲುವ ಯತ್ನದ ಭಾಗವಾಗಿ ಬಲೂನ್‌ಗಳಿಗೆ ಕಟ್ಟಿ, ಅದನ್ನು ವಿಡಿಯೋ ಮಾಡಿ ತನ್ನ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ. ಯೂಟ್ಯೂಬರ್ ಹಲವು ಬಣ್ಣದ ಆಕಾಶಬುಟ್ಟಿಗಳನ್ನು ನಾಯಿ ದೇಹದ ಮೇಲಿನ ಭಾಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲುವ ಪ್ರಯತ್ನ ಮಾಡಿದೆ.
ಈ ವಿಡಿಯೋ ಆನ್‌ಲೈನ್‌ಗೆ ಅಪ್ಲೋಡ್ ಆದ ಕೂಡಲೇ, ಯುಟೂಬರ್ನ ಅಸೂಕ್ಷ್ಮತೆ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಗೌರವ್ ಮತ್ತು ಅವರ ತಾಯಿ ವಿರುದ್ಧ ಐಪಿಸಿಯ 188, 269, 34 ಸೆಕ್ಷನ್ ಮತ್ತು ಪ್ರಾಣಿಗಳ ಕ್ರೌರ್ಯ ಕಾಯ್ದೆಯಡಿ ದೆಹಲಿಯ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ದಶಲಕ್ಷ ಚಂದಾದಾರರನ್ನು ಹೊಂದಿರುವ ಗೌರವ್, ಈ ನಂತರ ವಿಡಿಯೋ ಅಳಿಸಿಹಾಕಿದ. ವಿಡಿಯೋವನ್ನು ಚಿತ್ರೀಕರಿಸುವಾಗ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಆ ಭಾಗ ಅಪ್ಲೋಡ್ ಮಾಡಿದರೆ ವಿಡಿಯೋ ದೀರ್ಘವಾಗುತ್ತದೆ ಮಾಡಿರಲಿಲ್ಲ ಎಂದು ಸಮಂಜಸ ನೀಡಿದ.
ಈ ನಂತರ ಆತ ಈ ಘಟನೆಗೆ ಕ್ಷಮೆಯಾಚಿಸಿದ್ದಾನೆ. ತಾನು ಸಾಕುಪ್ರಾಣಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿರುವುದಾಗಿ ಹೇಳಿದೆ.