ಕರ್ನಾಟಕ

karnataka

ETV Bharat / crime

ಪ್ರೇಮ ವೈಫಲ್ಯ ಶಂಕೆ: ಕೆಲಸ ಮಾಡ್ತಿದ್ದ 13ನೇ ಮಹಡಿಯಿಂದಲೇ ಜಿಗಿದು ಯುವಕ ಆತ್ಮಹತ್ಯೆ - ಬೆಂಗಳೂರು ಸುದ್ದಿ

ಇಂಟೀರಿಯರ್ ಡೆಕೊರೇಶನ್ ಕೆಲಸ ಮಾಡುತ್ತಿದ್ದ ಕಟ್ಟಡದ 13ನೇ ಮಹಡಿಯಿಂದ ಜಿಗಿದು ಬಿಹಾರ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ ಬಳಿ ನಡೆದಿದೆ.

youth suicide jumping from 13th floor building in bangalore
ಪ್ರೇಮ ವೈಫಲ್ಯ ಶಂಕೆ; ಕೆಲಸ ಮಾಡ್ತಿದ್ದ 13ನೇ ಮಹಡಿಯಿಂದ ಜಿಗಿದು ಬಿಹಾರದ ಯುವಕ ಆತ್ಮಹತ್ಯೆ

By

Published : Sep 18, 2021, 7:51 PM IST

Updated : Sep 18, 2021, 8:04 PM IST

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಟ್ಟಡದ 13ನೇ ಮಹಡಿಯಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ ಬಳಿ ಇಂದು ಬೆಳಗ್ಗೆ ನಡೆದಿದೆ‌. ಬಿಹಾರ ಮೂಲದ ಹೃತಿಕ್ ಶಂಕರ್ (21) ಮೃತ ಯುವಕ. ಪ್ರೇಮ ವೈಫಲ್ಯದಿಂದ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಕಳೆದ ಮೂರು ತಿಂಗಳ ಹಿಂದೆ ನಗರಕ್ಕೆ ಬಂದು ತಿರುಮೇನಹಳ್ಳಿ ಬಳಿಯ ಶೆಡ್‌ವೊಂದರಲ್ಲಿ ವಾಸವಾಗಿದ್ದ. ಜೀವನಕ್ಕಾಗಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಹೃತಿಕ್ ಇಂದು ಎಂದಿನಂತೆ ಮಾನ್ಯತಾ ಟೆಕ್ ಪಾರ್ಕ್‌ನ ಕಟ್ಟಡವೊಂದರಲ್ಲಿ ಇಂಟೀರಿಯರ್ ಡೆಕೊರೇಶನ್ ಕೆಲಸ ಮಾಡುತ್ತಿದ್ದ. ಪ್ರೇಮ ವೈಫಲ್ಯದಿಂದ ಬೇಸತ್ತಿದ್ದರಿಂದ‌ ಬೆಳ್ಳಗೆ 11 ಗಂಟೆ ವೇಳೆ ಕಟ್ಟಡದ 13ನೇ‌ ಮಹಡಿಯಿಂದ ಜಿಗಿದಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಿಂದ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ‌. ಮೃತ ಯುವಕನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಸಂಪಿಗೆಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Last Updated : Sep 18, 2021, 8:04 PM IST

ABOUT THE AUTHOR

...view details