ಬೆಂಗಳೂರು:ನಗರದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆ ಪರಿಣಾಮ ಕಂಬದಿಂದ ಕೆಳಕ್ಕೆ ಬಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸಾವನ್ನಪ್ಪಿರುವ ದುರ್ಘಟನೆ ದೀಪಾಂಜಲಿ ನಗರದಲ್ಲಿ ಸಂಭವಿಸಿದೆ. ಹಣ್ಣಿನ ವ್ಯಾಪಾರಿಯಾಗಿದ್ದ ವಸಂತ್ (21) ಸಾವನ್ನಪ್ಪಿರುವ ಯುವಕ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ವಿದ್ಯುತ್ ಕಂಬದ ತಂತಿ ತಗುಲಿ ಯುವಕ ಸಾವು
ಬೆಂಗಳೂರು ನಗರದಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ಈ ವೇಳೆ ವಿದ್ಯುತ್ ಕಂಬದಿಂದ ಬಿದ್ದ ತಂತಿಯನ್ನು ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ್ದಾನೆ.
ಮಳೆಯಿಂದ ಉರುಳಿಬಿದ್ದ ವಿದ್ಯುತ್ ಕಂಬದ ತಂತಿ ತಗುಲಿ ಯುವಕ ಸಾವು
ಬುಧವಾರ ಸಂಜೆ ಸುರಿದ ಮಳೆಗೆ ವಿದ್ಯುತ್ ಕಂಬ ಉರುಳಿ ಬಿದ್ದಿತ್ತು. ನೆಲದಲ್ಲಿ ಬಿದ್ದಿದ್ದ ವೈರ್ನಿಂದ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ವಸಂತ್ ತೀವ್ರ ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಬೆಸ್ಕಾಂ ನಿರ್ಲಕ್ಷ್ಯವೇ ಯುವಕನ ಸಾವಿಗೆ ಕಾರಣವೆಂದು ಆರೋಪಿಸಲಾಗಿದ್ದು, ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಾಜಧಾನಿಗೆ ಇನ್ನೂ 3 ದಿನ ಮಳೆ: ಬಿಬಿಎಂಪಿ ಆಯುಕ್ತರ ತುರ್ತು ಸಭೆ