ಚೆನ್ನೈ: ಸಿಎ ವ್ಯಾಸಂಗ ಮಾಡುತ್ತಿದ್ದ ಧರ್ಮಪುರಿಯ 22 ವರ್ಷದ ವಿದ್ಯಾರ್ಥಿ ಆನ್ಲೈನ್ ಗೇಮ್ ಗೀಳು ಅಂಟಿಸಿಕೊಂಡು ಕೊನೆಗೆ ಆತ್ಮತ್ಯೆಗೆ ಶರಣಾಗಿದ್ದಾರೆ. ಚರಣ್ ನೇಣಿಗೆ ಶರಣಾಗಿರುವ ವಿದ್ಯಾರ್ಥಿ.
ಸ್ನೇಹಿತರೊಂದಿಗೆ ನೆಲೆಸಿದ್ದ ಅವರು ದೀಪಾವಳಿ ಪ್ರಯುಕ್ತ ಇತ್ತೀಚೆಗೆ ತಮ್ಮ ಊರಿಗೆ ತೆರಳಿದ್ದರು. ನಿನ್ನೆ (ನವೆಂಬರ್ 9) ಮತ್ತೆ ಚೆನ್ನೈಗೆ ವಾಪಸಾಗಿದ್ದರು. ಮೈಲಾಪುರದಲ್ಲಿದ್ದ ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಿನ್ನೆ (ನವೆಂಬರ್ 9) ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ಪಡೆದ ಮೈಲಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಆತ್ಮಹತ್ಯೆಗೆ ಕಾರಣ ಹುಡುಕಿದಾಗ ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡು ಚರಣ್ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಮೈಲಾಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಮಾಲ್ಡೀವ್ಸ್ ಭೀಕರ ಅಗ್ನಿ ದುರಂತ: 8 ಭಾರತೀಯರು ಸೇರಿ 11 ಮಂದಿ ಸಾವು