ನವದೆಹಲಿ:ಕಳ್ಳತನ ಮಾಡಿರುವ ಆರೋಪದ ಮೇಲೆ ಯುವಕನೋರ್ವನನ್ನ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಕಳ್ಳತನ ಆರೋಪಕ್ಕೆ ಬಿತ್ತು ಯುವಕನ ಹೆಣ ವಾಯುವ್ಯ ದೆಹಲಿಯ ಸ್ವರೂಪ ವಿಹಾರದಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಯುವಕನೋರ್ವ ಕಳ್ಳತನ ಮಾಡಲು ಯತ್ನಿಸಿದ್ದಾನೆಂದು ಆರೋಪಿಸಿ ಆತನನ್ನ ಯಂತ್ರವೊಂದಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಯಂತ್ರಕ್ಕೆ ಕಟ್ಟಿ ಹಾಕಿ ಯುವಕನ ಮೇಲೆ ಹಲ್ಲೆ ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಕಳೆದ ಕೆಲ ದಿನಗಳಿಂದ ಇಲ್ಲಿನ ಜನರು ಕಳ್ಳತನದಿಂದ ಬೇಸತ್ತು ಹೋಗಿದ್ದು, ಅನೇಕರು ರಾತ್ರಿ ವೇಳೆ ಗಸ್ತು ಸಹ ತಿರುಗುತ್ತಿದ್ದಾರೆ. ಇದರ ಮಧ್ಯೆ ಕೂಡ ಕಳ್ಳತನ ನಡೆಯುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: ಹೆತ್ತಮ್ಮನ ಚಿಕಿತ್ಸೆಗೋಸ್ಕರ ಹಣ ನೀಡಿ.. ಊರೂರು ತಿರುಗಿ ದೇಣಿಗೆ ಸಂಗ್ರಹಿಸುತ್ತಿರುವ ಮಕ್ಕಳು!
ನಿನ್ನೆ ರಾತ್ರಿ ಯುವಕ ಅನುಮಾನಾಸ್ಪದ ರೀತಿಯಲ್ಲಿ ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಕಾರಣ ಆತನನ್ನ ಹಿಡಿದು ಥಳಿಸಿ, ಕೊಲೆಗೈದಿದ್ದಾರೆ.