ಮೈಸೂರು: ಬಡತನ, ಅನಾರೋಗ್ಯದಿಂದ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನತಾ ನಗರದಲ್ಲಿ ನಡೆದಿದೆ.
ರಕ್ಷಿತಾ( 20) ಮೃತ ದುರ್ದೈವಿ.
ಬಡತನ, ಅನಾರೋಗ್ಯದಿಂದ ಮನ ನೊಂದು ಸಾವಿನ ಕದ ತಟ್ಟಿದ ಯುವತಿ! - ಮೈಸೂರು ಜಿಲ್ಲಾ ಸುದ್ದಿ
ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಕರಳು ಹಿಂಡುವಂತ ಘಟನೆ ನಡೆದಿದ್ದು, ತೀವ್ರ ಬಡತನ ಹಾಗೂ ಅನಾರೋಗ್ಯದಿಂದ ಮನ ನೊಂದ ಯುವತಿಯೊರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತೀವ್ರ ಬಡತನ, ಅನಾರೋಗ್ಯದಿಂದ ಮನ ನೊಂದು ಸಾವಿನ ಕದ ತಟ್ಟಿದ ಯುವತಿ!
ಆಟೋ ಓಡಿಸಿ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಮಹದೇವ್ ಗ್ಯಾಂಗ್ರಿನ್‌ನಿಂದಾಗಿ ಕಾಲು ಕಳೆದುಕೊಂಡಿದ್ದರು. ಮೃತಳ ತಾಯಿ ಮನೆ ಕೆಲಸ ಮಾಡಿಕೊಂಡಿ ಸಂಸಾರದೂಡುತ್ತಿದ್ದರು. ಕುಟುಂಬ ಆರ್ಥಿಕ ಮುಗ್ಗಟ್ಟನ್ನ ಎದುರಿಸುತ್ತಿದ್ದ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಿತಾ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.