ಕರ್ನಾಟಕ

karnataka

ETV Bharat / crime

ಟೈಲರ್ ಮನೆಗೆ ಹೋಗಿ ಬರುತ್ತೇನೆಂದು ಹೋದ ಯುವತಿ ನಾಪತ್ತೆ! - ಟೈಲರ್ ಮನೆಗೆ ಹೋಗಿ ಬರುತ್ತೇನೆಂದು ಹೋದ ಯುವತಿ ನಾಪತ್ತೆ!

ಟೈಲರ್ ಬಳಿ ಬಟ್ಟೆ ಹೊಲಿಸಿಕೊಂಡು ಬರುವುದಾಗಿ ಅಜ್ಜಿಗೆ ಹೇಳಿ ಜೂ.9ರಂದು ಮನೆಯಿಂದ ಹೋಗಿದ್ದ ಯುವತಿ ತಿರುಗಿ ಬಂದಿಲ್ಲ.

missing
missing

By

Published : Jun 11, 2021, 3:49 PM IST

ಗಂಗಾವತಿ (ಕೊಪ್ಪಳ):ಬಟ್ಟೆ ಹೊಲಿಸಿಕೊಂಡು ಬರುವುದಾಗಿ ಮನೆಯವರಿಗೆ ಹೇಳಿ ಟೈಲರ್ ಮನೆಗೆ ಹೋದ ಯುವತಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾದ ಘಟನೆ ತಾಲೂಕಿನ ರಾಂಪೂರದಲ್ಲಿ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಬಳ್ಳಾರಿ ಜಿಲ್ಲೆಯ ಕಮಲಾಪುರ ಮೂಲದ ಹತ್ತೊಂಬತ್ತು ವರ್ಷದ ಜ್ಯೋತಿ ಅಂಜಿನಪ್ಪ ಎಂದು ಗುರುತಿಸಲಾಗಿದೆ.

ಕಳೆದ ಹಲವು ವರ್ಷದಿಂದ ಮಾವನ‌ ಮನೆ ರಾಂಪೂರದಲ್ಲಿಯೇ ವಾಸವಾಗಿದ್ದ ಯುವತಿ, ಸಾವಿತ್ರಿ ಟೈಲರ್ ಬಳಿ ಬಟ್ಟೆ ಹೊಲಿಸಿಕೊಂಡು ಬರುವುದಾಗಿ ಅಜ್ಜಿ ಬೋರಮ್ಮನಿಗೆ ಹೇಳಿ ಜೂ.9ರಂದು ಮನೆಯಿಂದ ಹೋಗಿದ್ದು ತಿರುಗಿ ಬಂದಿಲ್ಲ.

ಯುವತಿ ನಾಪತ್ತೆ ಎಂದು ದೂರು

ಎಲ್ಲ ಕಡೆ ಹುಡುಕಿದ ಬಳಿಕ ಮಾವ ಛತ್ರಪ್ಪ ದಾಸಪ್ಪ ಇದೀಗ ಸೊಸೆಯನ್ನು ಹುಡುಕಿಕೊಡುವಂತೆ ಗ್ರಾಮೀಣ ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.

ABOUT THE AUTHOR

...view details