ಕರ್ನೂಲ್(ಆಂಧ್ರಪ್ರದೇಶ): ಗಣಪತಿ ಉತ್ಸವದ ವೇಳೆ ಅವಘಡವೊಂದು ಜರುಗಿದೆ. ಯುವಕನೋರ್ವ ಗಣಪತಿ ಮುಂದೆ ಸಿನಿಮಾ ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿದ್ದ ವೇಳೆಯೇ ಕುಸಿದು ಸಾವನ್ನಪ್ಪಿರುವ ದುರ್ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಗಣೇಶನ ಮುಂದೆ ಕುಣಿಯುತ್ತಲೇ ಕುಸಿದುಬಿದ್ದು ಪ್ರಾಣಬಿಟ್ಟ ಯುವಕ! - ಗಣೇಶನ ಮುಂದೆ ಕುಣಿಯುತ್ತಲೇ ಯುವಕ ಸಾವು
ವಿನಾಯಕ ಚತುರ್ಥಿ ಹಿನ್ನೆಲೆಯಲ್ಲಿ ಗಣಪತಿ ಮುಂದೆ ಡ್ಯಾನ್ಸ್ ಮಾಡುತ್ತಲೇ ಯುವಕನೋರ್ವ ಪ್ರಾಣಬಿಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಗಣೇಶನ ಮುಂದೆ ಕುಣಿಯುತ್ತಲೇ ಕುಸಿದು ಪ್ರಾಣಬಿಟ್ಟ ಯುವಕ!
ಇಲ್ಲಿನ ಅನಂತಪುರ ಜಿಲ್ಲೆಯ ಗುತ್ತಿ ಬಳಿಯ ಗೌತಮಿಪುರ ಕಾಲೋನಿಯಲ್ಲಿ ಅವಘಡ ಸಂಭವಿಸಿದೆ. ಕುಲ್ಲಯ್ಯಸ್ವಾಮಿ (ಚರಣ್) ಮೃತಪಟ್ಟ ಯುವಕ. ತಕ್ಷಣ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲೇ ಚರಣ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಗುತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.