ಕರ್ನಾಟಕ

karnataka

ETV Bharat / crime

ಕೋವಿಡ್​ ಬಿಕ್ಕಟ್ಟಿನಿಂದ 3 ವರ್ಷ ದೂರ, ದೂರ.. ಪ್ರೇಯಸಿ ಭೇಟಿಗೆ ಸಾಧ್ಯವಾಗದ್ದಕ್ಕೆ ದುರಂತ! - Young Man Committed Suicide As He Could Not Go Back to His Girl Friend from Three Years

ಮೂರು ವರ್ಷಗಳಿಂದ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

Young Man Committed Suicide As He Could Not Go Back to His Girl Friend from Three Years
3 ವರ್ಷದಿಂದ ಪ್ರೇಯಸಿ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಮನವೊಂದು ಯುವಕ ಆತ್ಮಹತ್ಯೆ

By

Published : Jan 2, 2022, 5:46 PM IST

ಹೈದರಾಬಾದ್‌(ತೆಲಂಗಾಣ): ಕಳೆದ 3 ವರ್ಷಗಳಿಂದ ತನ್ನ ಗೆಳತಿಯನ್ನು ಭೇಟಿ ಮಾಡಲು ಸಾಧ್ಯವಾಗದ ಕಾರಣ ಮನನೊಂದು ಯುವಕನೋರ್ವ ಮರಳಿ ಬಾರದ ಲೋಕಕ್ಕೆ ತೆರಳಿರುವ ಹೃದಯವಿದ್ರಾವಕ ಘಟನೆ ಮುತ್ತಿನನಗರಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ 22 ವರ್ಷದ ವಿನೀತ್‌ ಮೃತ ಯುವಕ. ಈ ಸಂಬಂಧ ಪಹದಿ ಶರೀಫ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ವಿನೀತ್‌ ಯುಪಿಯಿಂದ ಕೆಲಸಕ್ಕಾಗಿ ವಲಸೆ ಬಂದಿದ್ದು, ನಗರದ ಹಲವು ಕಡೆ ಕೆಲಸ ಮಾಡಿದ್ದಾನೆ. ಪ್ರಸ್ತುತ ಈತ ಶ್ರೀನಗರ ಕಾಲೋನಿಯ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅದೇ ಪ್ರದೇಶದಲ್ಲೇ ವಾಸವಾಗಿದ್ದ ಎಂದು ಹೇಳಿದ್ದಾರೆ.

ಹುಟ್ಟೂರಾದ ಉತ್ತರ ಪ್ರದೇಶದಲ್ಲಿ ವಿನೀತ್‌ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ಹೇಳಿದ್ದ. ಒಳ್ಳೆ ಜೀವನ ನಡೆಸಲು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಲಸವನ್ನು ಹುಡುಕಿಕೊಂಡು ಹೈದರಾಬಾದ್‌ಗೆ ಬಂದಿದ್ದ. ಆದರೆ ಬಂದ ಮೊದಲ ವರ್ಷವೇ ಕೋವಿಡ್‌ ಲಾಕ್‌ಡೌನ್‌ನಿಂದ ಮತ್ತೆ ಯುಪಿಗೆ ಹೋಗಲು ಸಾಧ್ಯವಾಗಲಿಲ್ಲ. ಕೊರೊನಾ ಸಂಕಷ್ಟದಿಂದ ಸಾಕಷ್ಟು ಹಣದ ಸಮಸ್ಯೆಯನ್ನು ಈತ ಎದುರಿಸಿದ್ದಾನೆ. ಇದರಿಂದಾಗಿ ಊರಿಗೆ ಹೋಗಲು ಆಗಲಿಲ್ಲ. ಆದರೆ ತನ್ನ ಕೆಲಸದ ನಂತರ ಗಂಟೆಗಟ್ಟಲೇ ತನ್ನ ಪ್ರೇಯಸಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ.

ಆದರೆ ಶನಿವಾರ ಎಂದಿನಂತೆ ಕೆಲಸ ಮುಗಿಸಿ ಪ್ರೇಯಸಿಗೆ ಫೋನ್‌ ಮಾಡಿದಾಗ ಆಕೆ ಸಿಟ್ಟಾಗಿದ್ದಾಳೆ. ಮೂರು ವರ್ಷದಿಂದ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ ನ್ಯೂ ಇಯರ್‌ಗೆ ಬರುವುದಾಗಿ ಹೇಳಿದ್ದ ವಿನೀತ್‌ ಆ ಮಾತನ್ನು ನಡೆಸಿಕೊಂಡಿರಲಿಲ್ಲ. ಈ ಎಲ್ಲಾ ಬೆಳವಣಿಗಗಳಿಂದ ಬೇಸತ್ತು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಘಟನೆ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ:ಚಲಿಸುತ್ತಿದ್ದ ರೈಲಿನಡಿ ಸಿಲುಕಿ ವಾಟರ್‌ಮ್ಯಾನ್‌ ಸಾವು, ದೇಹ ಛಿದ್ರ

For All Latest Updates

TAGGED:

ABOUT THE AUTHOR

...view details