ಕೋಲಾರ/ಬೆಂಗಳೂರು: ಪ್ರೇಯಸಿ ಕರೆ ಸ್ವೀಕರಿಸಿಲ್ಲ ಎಂದು ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಾರಪಟ್ಟಣ ಗ್ರಾಮದ ಸಮೀಪ ನಡೆದಿದೆ.
ಕರೆ ಸ್ವೀಕರಿಸದ ಪ್ರೇಯಸಿ: ನೊಂದ ಯುವಕ ಆತ್ಮಹತ್ಯೆಗೆ ಶರಣು - Shivarapatna, Bangalore Rural District
ಪ್ರಿಯತಮೆ ಫೋನ್ ರಿಸೀವ್ ಮಾಡಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
![ಕರೆ ಸ್ವೀಕರಿಸದ ಪ್ರೇಯಸಿ: ನೊಂದ ಯುವಕ ಆತ್ಮಹತ್ಯೆಗೆ ಶರಣು suicide-of-young-man](https://etvbharatimages.akamaized.net/etvbharat/prod-images/768-512-10886853-thumbnail-3x2-vis.jpg)
ಪ್ರೇಯಿಸಿ ಕರೆ ಸ್ವೀಕರಿಸಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ
ಹೊಸಕೋಟೆ ತಾಲೂಕಿನ ಕೊರಟಿ ಗ್ರಾಮದ ಮನೋಜ್ ಕುಮಾರ್ (24) ಮೃತ ಯುವಕ. ಈತ ಶಿವಾರಪಟ್ಟಣ ಗ್ರಾಮದ ಸಮೀಪದ ಕೆಸಿ ವ್ಯಾಲಿ ಯೋಜನೆಯಡಿ ಸ್ಥಾಪಿಸಿರುವ ಪಂಪ್‌ಹೌಸ್‌ನಲ್ಲಿ ಒಂದು ವರ್ಷದಿಂದ ಜಲಗಾರನಾಗಿ ಕೆಲಸ ಮಾಡುತ್ತಿದ್ದ.
ಸುನೀಲ್ ತನ್ನ ಪ್ರೇಯಸಿಗೆ ನಿರಂತರ ಕರೆ ಮಾಡಿದರೂ ಸಹ ಆಕೆ ಕರೆ ಸ್ವೀಕರಿಸಲಿಲ್ಲ. ಇದರಿಂದ ಬೇಸರಗೊಂಡು ಪಂಪ್‌ಹೌಸ್‌ನ ಕಟ್ಟಡದ ಸಮೀಪ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಮಾಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Mar 6, 2021, 1:43 PM IST