ಕರ್ನಾಟಕ

karnataka

ETV Bharat / crime

ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸ್ಕೆಚ್‌; ಸಿಸಿಬಿಯಿಂದ ಪ್ರಕರಣದ ತನಿಖೆ - ಯಲಹಂಕ ಬಿಜೆಪಿ ಶಾಸಕ

ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿದ್ದ ಗಂಭೀರ ಆರೋಪ ಕೇಳಿಬಂದಿದೆ. ವಿಶ್ವನಾಥ್‌ ವಿರುದ್ಧ ಸ್ಪರ್ಧಿಸಿ ಎರಡು ಬಾರಿ ಸೋಲು ಕಂಡಿದ್ದ ಕಾಂಗ್ರೆಸ್‌ ಮುಖಂಡ ಎಂ.ಎನ್‌.ಗೋಪಾಲಕೃಷ್ಣ ಅವರು ಹತ್ಯೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್‌ ಆಗಿದೆ. ಈ ಕುರಿತು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bjp Mla SR Vishwanath murder sketch in bangalore; video viral
ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸ್ಕೆಚ್‌; ಪೊಲೀಸರಿಂದ ಇಬ್ಬರ ವಿಚಾರಣೆ

By

Published : Dec 1, 2021, 12:57 PM IST

Updated : Dec 1, 2021, 2:27 PM IST

ಬೆಂಗಳೂರು:ಯಲಹಂಕ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಹತ್ಯೆಗೆ ಕಾಂಗ್ರೆಸ್‌ ಮುಖಂಡ ಎಂ.ಎನ್‌.ಗೋಪಾಲಕೃಷ್ಣ ಯೋಜನೆ ರೂಪಿಸಿದ್ದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಶ್ವನಾಥ್‌ ಬೆಂಬಲಿಗ ದೇವರಾಜ್ ಅಲಿಯಾಸ್ ಕುಳ್ಳ ದೇವರಾಜ್ ವಿಡಿಯೋ ಮಾಡಿದ್ದು, ಗೋಪಾಲಕೃಷ್ಣ ಅವರು ಮಾತನಾಡಿದ್ದಾರೆ ಎನ್ನಲಾದ 5 ತಿಂಗಳ ಹಿಂದಿನ ವಿಡಿಯೋ ಇದೀಗ ದೊರೆತಿದೆ.

ಈ ವಿಡಿಯೋ ಕ್ಲಿಪ್‌ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಿಸಿಬಿ ಪೊಲೀಸರು ಗೋಪಾಲಕೃಷ್ಣ ಅವರನ್ನು ವಶಕ್ಕೆ ಪಡೆದು ಇಡೀ ರಾತ್ರಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ, ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸುವ ಬಗ್ಗೆ ವಿಡಿಯೋ ಮಾಡಿದ್ದ ದೇವರಾಜ್‌ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Last Updated : Dec 1, 2021, 2:27 PM IST

ABOUT THE AUTHOR

...view details