ಬೆಳಗಾವಿ: ಮದುವೆ ಆದಾಗಿನಿಂದ ಪತಿ ಹಾಗೂ ಅತ್ತೆ - ಮಾವನ ನಿರಂತರ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ. ಸುರೇಖಾ ಶ್ರೀನಾಥ್ ನಾಯಕ(21) ಮೃತ ದುರ್ದೈವಿ.
ಅಪಶಕುನ ಎಂದು ಪತಿ, ಅತ್ತೆ - ಮಾವ ಕಿಚಾಯಿಸಿದ ಆರೋಪ: ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ - ಬೆಳಗಾವಿ ಜಿಲ್ಲೆ
ನಿನ್ನ ಕಾಲ್ಗುಣ ಸರಿಯಿಲ್ಲ, ಅಪಶಕುನ ಇದ್ದೀಯಾ ಎಂದು ಪತಿ, ಅತ್ತೆ - ಮಾವ ನಿರಂತರ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ.
ನಿನ್ನ ಕಾಲ್ಗುಣ ಸರಿಯಿಲ್ಲ, ಅಪಶಕುನ ಇದ್ದೀಯಾ ಎಂದು ಪತಿ, ಅತ್ತೆ - ಮಾವ ನಿರಂತರ ಕಿರುಕುಳ ನೀಡುತ್ತಿದ್ದರು. ಪತಿಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಸುರೇಖಾ ಮೂರು ದಿನಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದರು. ನಿಡಗುಂದಿ ಗ್ರಾಮದಿಂದ ಮೂರು ಕಿ.ಮೀ ದೂರದ ತೋಟದಲ್ಲಿರುವ ಬಾವಿಗೆ ಹಾರಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನನ್ನ ಹಾದಿಗೆ ಕಾಯಬೇಡ, ನಾನು ಸತ್ತು ಹೋಗುತ್ತೇನೆ. ನನಗೆ ಸಾಕು, ನನಗೆ ಶನಿ ಹತ್ತಿದೆ. ಇನ್ನು ಮುಂದೆ ನೀನು ಬೇರೆ ಮದುವೆ ಮಾಡಿಕೊಂಡು ಸುಖವಾಗಿರು. ಹೀಗೆ ಡೆತ್ ನೋಟ್ ಬರೆದಿಟ್ಟು ಸುರೇಖಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.