ಮೈಸೂರು :ಮಗಳ ಅನಾರೋಗ್ಯದಿಂದ ಖಿನ್ನತೆಗೊಳಗಾಗಿದ್ದ ಮಹಿಳೆ ಆಸ್ಪತ್ರೆಯ ಬಾತ್ ರೂಮ್‌ನಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ತನ್ನ 7 ವರ್ಷದ ಪುತ್ರಿಯನ್ನು ಅನಾರೋಗ್ಯದ ಕಾರಣ ಚಿಕಿತ್ಸೆಗೆ ದಾಖಲಿಸಿದ್ದ ಯಾಸ್ಮಿನ್ (30). ಜನವರಿ 4 ರಂದು ಆಸ್ಪತ್ರೆಯ ಬಾತ್ ರೂಮ್‌ನಲ್ಲಿ ಚಾಕುವಿನಿಂದ ಗಂಟಲನ್ನೂ ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಮಹಿಳೆ ನಗರದ ಹೂಟಗಳ್ಳಿ ನಿವಾಸಿಯಾಗಿದ್ದರು. ಮಗಳ ಜೊತೆಗೆ ಆಸ್ಪತ್ರೆಯಲ್ಲೇ ಇದ್ದರು.