ಕರ್ನಾಟಕ

karnataka

ETV Bharat / crime

ನಂಜನಗೂಡು: ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯ ಕೊಲೆ - ಕೈಗಾರಿಕಾ ಪ್ರದೇಶದ ಐಟಿಸಿ ಕಾರ್ಖಾನೆ

ಹದಿನಾರು ಮೋಳೆ ಗ್ರಾಮದ ಪಲ್ಲವಿ (26) ಮೃತ ದುರ್ದೈವಿ‌‌. ಈಕೆ ಮೂರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಹಿಮ್ಮಾವು ಕೈಗಾರಿಕಾ ಪ್ರದೇಶದ ಐಟಿಸಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು.

women-murder-case-in-nanjanagudu-news
ತಲೆ ಮೇಲೆ ಕಲ್ಲು ಎತ್ತಿಹಾಕಿ ವಿವಾಹಿತ ಮಹಿಳೆ ಕೊಲೆ

By

Published : Feb 24, 2021, 6:44 PM IST

ಮೈಸೂರು:ವಿವಾಹಿತ ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಓದಿ: ಮೈಸೂರು ಮೇಯರ್ ಆಯ್ಕೆ ಒಪ್ಪಂದವನ್ನು ಜೆಡಿಎಸ್ ಮರೆತಿದೆ: ಡಿಕೆಶಿ

ಹದಿನಾರು ಮೋಳೆ ಗ್ರಾಮದ ಪಲ್ಲವಿ (26) ಮೃತ ದುರ್ದೈವಿ‌‌. ಈಕೆ ಮೂರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಹಿಮ್ಮಾವು ಕೈಗಾರಿಕಾ ಪ್ರದೇಶದ ಐಟಿಸಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು.

ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಿಂದ ಹದಿನಾರು ಮೋಳೆ ಗ್ರಾಮದ ಮಾದು ಎಂಬುವವರ ಜತೆ ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳು ಇವೆ. ಮಂಗಳವಾರ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ಊರಿಗೆ ತೆರಳುವ ಸಂದರ್ಭದಲ್ಲಿ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಮೃತದೇಹ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಈ ಸಂಬಂಧ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details