ಬಳ್ಳಾರಿ:ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳ್ಳಾರಿ: ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಅಂದರ್ - District Police Superintendent Saidulu Adawat
ಕೊಲೆ ಆರೋಪಿ ಸೆರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಹಂಪಿ ಉಪವಿಭಾಗದ ಡಿವೈಎಸ್‍ಪಿ ಎಸ್.ಎಸ್.ಕಾಶಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್ ಹೆಚ್.ತಳವಾರ, ಪಿಎಸ್‍ಐ ವಿರೂಪಾಕ್ಷಪ್ಪ ನೇತೃತ್ವದಲ್ಲಿ ತಂಡ ಬಲೆ ಬೀಸಿತ್ತು.
![ಬಳ್ಳಾರಿ: ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಅಂದರ್ women murder accused arrested in bellary news](https://etvbharatimages.akamaized.net/etvbharat/prod-images/768-512-10709124-294-10709124-1613834285103.jpg)
ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಎಸ್.ಎನ್.ಪೇಟೆಯ ಮಲ್ಲಿಕಾರ್ಜುನ ದೇವಸ್ಥಾನ ಬಳಿಯಲ್ಲಿ ಫೆ. 14ರಂದು ರಾತ್ರಿ ಸಮಯದಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ನಾಗಮ್ಮ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದ ಆರೋಪಿ ಶೇಖರ ಕಣ್ಮರೆಯಾಗಿದ್ದ.
ಕೊಲೆ ಆರೋಪಿ ಸೆರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಹಂಪಿ ಉಪವಿಭಾಗದ ಡಿವೈಎಸ್‍ಪಿ ಎಸ್.ಎಸ್.ಕಾಶಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್ ಹೆಚ್.ತಳವಾರ, ಪಿಎಸ್‍ಐ ವಿರೂಪಾಕ್ಷಪ್ಪ ನೇತೃತ್ವದಲ್ಲಿ ತಂಡ ಬಲೆ ಬೀಸಿತ್ತು.
ಆಂಧ್ರ ಪ್ರದೇಶದ ಆದೋನಿಯ ಕರಿಯಪ್ಪ ಹಾಸ್ಟೆಲ್ನಲ್ಲಿದ್ದ ಆರೋಪಿ ಶೇಖರನನ್ನು ಪೊಲೀಸರು ಬಂಧಿಸಿ, ಕಂಪ್ಲಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ನಂತರ ನ್ಯಾಯಾಂಗ ಬಂಧನಕ್ಕೆ ಆರೋಪಿಯನ್ನು ಒಪ್ಪಿಸಲಾಗಿದೆ.