ಆನಂದ್, ಗುಜರಾತ್:ತೀವ್ರ ಹಣಕಾಸು ತೊಂದರೆಯಿಂದ ಮಹಿಳೆ ತನ್ನ ಮಗನನ್ನು ವಿಷವಿಟ್ಟು ಕೊಂದು, ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ.
ಮಕ್ಕಳಿಗೆ ವಿಷವಿಟ್ಟು ತಾನೂ ವಿಷ ಸೇವಿಸಿದ ಮಹಿಳೆ: ಇಬ್ಬರ ಸಾವು - ಲೇಟೆಸ್ಟ್ ಗುಜರಾತ್ ಸುದ್ದಿ
ಹಣಕಾಸು ತೊಂದರೆಯಿಂದಾಗಿ ಮಹಿಳೆಯೋರ್ವಳು ತನ್ನ ಮಗನನ್ನು ಕೊಂದು, ತಾನೂ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನಂದ್ ಜಿಲ್ಲೆಯಲ್ಲಿ ನಡೆದಿದೆ.
ಮಕ್ಕಳಿಗೆ ವಿಷವಿಟ್ಟು ತಾನೂ ವಿಷ ಸೇವಿಸಿದ ಮಹಿಳೆ: ಇಬ್ಬರ ಸಾವು
ಹಣಕಾಸು ತೊಂದರೆಯಿಂದ ಟೀನಾ ಪ್ರಕಾಶ್ ಶಾ(38) ಎಂಬಾಕೆ ಆಕೆಯ 12 ವರ್ಷದ ಪುತ್ರ ಮೀತ್ ಮತ್ತು 15 ವರ್ಷದ ಪುತ್ರಿಗೆ ವಿಷ ನೀಡಿ, ತಾನೂ ಕೂಡಾ ವಿಷ ಸೇವಿಸಿದ್ದಳು. ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮತ್ತು ಪುತ್ರ ಮೀತ್ ಮೃತಪಟ್ಟಿದ್ದಾರೆ.
15 ವರ್ಷ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ಡಿ.ಜಡೇಜಾ ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.