ಕರ್ನಾಟಕ

karnataka

ETV Bharat / crime

ಮನದಲ್ಲಿ ನೋವು, ಮುಖದಲ್ಲಿ ನಗು.. ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ - ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ

ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ ವಿಡಿಯೋ ಮಾಡಿಟ್ಟು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಜಸ್ಥಾನದಲ್ಲಿ ಈ ಪ್ರಕರಣ ನಡೆದಿದೆ.

Woman commits suicide by jumping into Sabarmati river
ಸಾಯುವ ಮುನ್ನ ವಿಡಿಯೋ ಮಾಡಿದ ನೊಂದ ಮಹಿಳೆ

By

Published : Feb 28, 2021, 8:03 AM IST

ಜಲೋರ್ (ರಾಜಸ್ಥಾನ): ಮಹಿಳೆಯೊಬ್ಬರು ವಿಡಿಯೋ ಮಾಡಿಟ್ಟು, ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ.

2018 ರಲ್ಲಿ ಆರಿಫ್ ಎಂಬಾತನೊಂದಿಗೆ ಮಹಿಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ವರದಕ್ಷಿಣೆಗಾಗಿ ಆರಿಫ್ ಕಿರುಕುಳ ನೀಡಲು ಪ್ರಾರಂಭಿಸಿದ್ದು, ಈ ಸಂಬಂಧ ಮಹಿಳೆಯ ತಂದೆ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ನೊಂದ ಮಹಿಳೆ ಫೆ.25ರಂದು ನದಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ.

ಸಾಯುವ ಮುನ್ನ ವಿಡಿಯೋ ಮಾಡಿದ ನೊಂದ ಮಹಿಳೆ

ಇದನ್ನೂ ಓದಿ: ದೇಹದ ಮೇಲೆ ಹೆಬ್ಬಾವು ಹಾಕಿಕೊಂಡು ಸಖತ್ ಡ್ಯಾನ್ಸ್​... ವಿಡಿಯೋ ವೈರಲ್​!

ಸಾಯುವ ಮುನ್ನ ತನ್ನ ಪತಿಗೆ ವಿಡಿಯೋ ಸಂದೇಶ ನೀಡಿರುವ ಮಹಿಳೆ, ದೇವರು ಕೊಟ್ಟಿರುವ ಜೀವನ ಇದು, ಅರ್ಥಮಾಡಿಕೊಳ್ಳಿ. ನಾನು ಸಂತೋಷವಾಗಿದ್ದೇನೆ, ನಾನು ವಿಶ್ರಾಂತಿ ಪಡೆಯಲು ಬಯಸುತ್ತೇನೆ. ಮನುಷ್ಯರ ಕ್ರೂರತೆಯನ್ನು ಮತ್ತೆ ತೋರಿಸದಂತೆ ನಾನು ಅಲ್ಹಾನಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿವೆ. ನಾನು ಗಾಳಿಯಂತೆ, ಎಲ್ಲೂ ನಿಲ್ಲದೆ ಸಂಚರಿಸಲು ಬಯಸುತ್ತೇನೆ. ಅಪ್ಪಾ, ನಾವು ನಮ್ಮ ಪ್ರೀತಿಪಾತ್ರರೊಡನೆ ಎಷ್ಟು ದಿನ ಹೋರಾಡಲು ಸಾಧ್ಯ? ಪ್ರಕರಣವನ್ನು ಹಿಂತೆಗೆದುಕೊಳ್ಳಿ. ನಾನು ಈಗ ಅಲ್ಹಾನನ್ನು ಭೇಟಿಯಾಗುತ್ತೇನೆ, ನನ್ನ ತಪ್ಪು ಎಲ್ಲಿದೆ ಎಂದು ಕೇಳುತ್ತೇನೆ ಎಂದು ಹೇಳಿ, ನದಿಗೆ ಹಾರಿದ್ದಾಳೆ.

ABOUT THE AUTHOR

...view details