ಕರ್ನಾಟಕ

karnataka

ETV Bharat / crime

ದಲಿತ ಯುವತಿ ಮೇಲೆ ಗ್ಯಾಂಗ್​ರೇಪ್​.. ಮರ್ಮಾಂಗಕ್ಕೆ ಬಾಟಲಿ ತುರುಕಿ ಕಟುಕರ ವಿಕೃತಿ - ದಲಿತ ಯುವತಿ ಮೇಲೆ ರಾಜಸ್ಥಾನದಲ್ಲಿ ಸಾಮೂಹಿಕ ಅತ್ಯಾಚಾರ

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ಮರ್ಮಾಂಗಕ್ಕೆ ಕಾಮುಕರು ಬಾಟಲಿಗಳನ್ನು ತುರುಕಿದ ಅಮಾನವೀಯ ಘಟನೆ ರಾಜಸ್ಥಾನದ ನಾಗೌರ್​ನಲ್ಲಿ ​ನಡೆದಿದೆ.

Woman gangraped
ದಲಿತ ಯುವತಿ ಮೇಲೆ ಗ್ಯಾಂಗ್​ರೇಪ್

By

Published : Jan 26, 2021, 7:09 AM IST

Updated : Jan 26, 2021, 7:35 AM IST

ನಾಗೌರ್​ (ರಾಜಸ್ಥಾನ):ದಲಿತ ಯುವತಿ ಮೇಲೆ ರಾಜಸ್ಥಾನದ ನಾಗೌರ್​ನ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ಮರ್ಮಾಂಗಕ್ಕೆ ಬಾಟಲಿಗಳನ್ನು ತುರುಕಿ ವಿಕೃತಿ ಮೆರೆದಿರುವ ಘಟನೆ ಪರ್ಬಾಸ್ತಾರ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜನವರಿ 19ರಂದು ನಾಗೌರ್​ನ ಗಂಗ್ವಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಮುಕರು ಬೆದರಿಕೆ ಹಾಕಿದ್ದರಿಂದ ಹೆದರಿಕೊಂಡು ಸಂತ್ರಸ್ತೆ ವಿಷಯವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಐದು ದಿನಗಳ ಬಳಿಕ ಮಗಳ ಪರಿಸ್ಥಿತಿ ತಿಳಿದ ಪೋಷಕರು ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ: ಕೊಳ್ಳೇಗಾಲದಲ್ಲಿ ಆರೋಪಿ ಅರೆಸ್ಟ್​

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪರ್ಬಾಸ್ತಾರ್​ ಠಾಣಾ ಪೊಲೀಸರು, ಪರಾರಿಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಪಂಚುರಾಮ್ ಜಾಟ್, ಕನರಾಮ್ ಜಾಟ್ ಮತ್ತು ಶ್ರವಣ್ ಗುರ್ಜಾರ್ ಎಂದು ಗುರುತಿಸಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Last Updated : Jan 26, 2021, 7:35 AM IST

ABOUT THE AUTHOR

...view details