ಕರ್ನಾಟಕ

karnataka

ETV Bharat / crime

ಚಿಕ್ಕಬಳ್ಳಾಪುರ: ಬಸ್ ಹತ್ತುವ ಭರದಲ್ಲಿ ಮತ್ತೊಂದು ಬಸ್‌ಗೆ ಸಿಲುಕಿ ಮಹಿಳೆ ಸಾವು - ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮ

ಮಹಿಳೆ ವಸಂತಮ್ಮ ಶ್ರೀನಿವಾಸಪುರ ನಗರಕ್ಕೆ ಹೋಗುವ ಸಲುವಾಗಿ ಮತ್ತೊಂದು ಬಸ್ ನಿಲ್ಲಿಸಲು ರಸ್ತೆ ದಾಟುವ ವೇಳೆ ಏಕಾಏಕಿ ಕೆಎಸ್​​ಆರ್​​​ಟಿಸಿ‌ ಬಸ್ ಮುಂಭಾಗಕ್ಕೆ ನುಗ್ಗಿದ್ದು, ಮಹಿಳೆಯನ್ನು ಗಮನಿಸದ ಚಾಲಕ ಮಹಿಳೆಯ ಮೇಲೆ ಬಸ್ ಹರಿಸಿದ್ದ ಹಿನ್ನೆಲೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

woman-dies-after-being-hit-bus-chikballapura-news
ಬಸ್ ಹತ್ತುವ ಬರದಲ್ಲಿ ಮತ್ತೊಂದು ಬಸ್‌ಗೆ ಸಿಲುಕಿ ಮಹಿಳೆ ಸಾವು

By

Published : Feb 28, 2021, 7:58 PM IST

ಚಿಕ್ಕಬಳ್ಳಾಪುರ: ಬಸ್ ಹತ್ತುವ ಭರದಲ್ಲಿ ಮತ್ತೊಂದು ಬಸ್ ಚಕ್ರಕ್ಕೆ ಸಿಲುಕಿ ಮಹಿಳೆಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮದ ಬಳಿ ನಡೆದಿದೆ.

ಓದಿ: ಯೂಟ್ಯೂಬ್​ ನೋಡಿ ದರೋಡೆಗೆ ಮಾಸ್ಟರ್​​ ಪ್ಲಾನ್​.. ಅಷ್ಟೆಲ್ಲಾ ಮಾಡಿದ್ರೂ ನಡೀಲಿಲ್ಲ ಆಟ..

ಗ್ರಾಮದ ಹೂವು ಮಾರಾಟ ಮಾಡುತ್ತಿದ್ದ ವಸಂತಮ್ಮ (58) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಶ್ರೀನಿವಾಸಪುರದಿಂದ ಚಿಂತಾಮಣಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ ಕೊಡದವಾಡಿ ನಿಲ್ದಾಣದ ಬಳಿ ನಿಲ್ಲಿಸಲಾಗಿತ್ತು. ಮಹಿಳೆ ವಸಂತಮ್ಮ ಶ್ರೀನಿವಾಸಪುರಕ್ಕೆ ಹೋಗುವ ಸಲುವಾಗಿ ಮತ್ತೊಂದು ಬಸ್ ನಿಲ್ಲಿಸಲು ರಸ್ತೆ ದಾಟುವ ವೇಳೆ ಏಕಾಏಕಿ ಕೆಎಸ್​​ಆರ್​​​ಟಿಸಿ‌ ಬಸ್ ಮುಂಭಾಗಕ್ಕೆ ನುಗ್ಗಿದ್ದು, ಮಹಿಳೆಯನ್ನು ಗಮನಿಸದ ಚಾಲಕ ಮಹಿಳೆಯ ಮೇಲೆ ಬಸ್ ಹರಿಸಿದ್ದರಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಮೃತಳ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಇನ್​ಸ್ಪೆಪೆಕ್ಟರ್ ಶ್ರೀನಿವಾಸಪ್ಪ ಸ್ಥಳಕ್ಕೆ ಭೇಟಿ ನೀಡಿ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details