ಕರ್ನಾಟಕ

karnataka

ETV Bharat / crime

ಹತ್ಯೆಗೆ ಬಂದವರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಉಳಿಸಿಕೊಂಡ ತೆಲಂಗಾಣದ ದಿಟ್ಟ ಮಹಿಳೆ! - wife saved husband from getting killed in warangal

ತೆಲಂಗಾಣದ ವಾರಂಗಲ್‌ ಜಿಲ್ಲೆಯಲ್ಲಿ ಗೃಹಣಿ ಕಲ್ಯಾಣಿ ಎಂಬುವರು ತೋರಿದ ಧೈರ್ಯಕ್ಕೆ ಆಕೆಯ ಪತಿಯ ಪ್ರಾಣ ಉಳಿದಿದೆ. ಪತಿ ಹತ್ಯೆ ಮಾಡಲು ಬಂದಿದ್ದವರಿಗೆ ಈಕೆ ಖಾರದ ಪುಡಿ ಎರಚುವ ಮೂಲಕ ಸಾಹಸ ಮೆರೆದಿದ್ದಾಳೆ..

wife saved husband from getting killed in warangal
ಹತ್ಯೆಗೆ ಬಂದವರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನ ಉಳಿಸಿಕೊಂಡ ತೆಲಂಗಾಣದ ದಿಟ್ಟ ಮಹಿಳೆ..!

By

Published : Jan 21, 2022, 7:15 PM IST

Updated : Jan 21, 2022, 7:21 PM IST

ಹೈದರಾಬಾದ್‌ :ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಖಾರದ ಪುಡಿ ಎರಚಿದ ಗೃಹಿಣಿ ತನ್ನ ಪತಿಯನ್ನು ಉಳಿಸಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ.

'ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್' ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಲ್ವರು ದುಷ್ಕರ್ಮಿಗಳು ಆಟೋದಲ್ಲಿ ಬಂದಿದ್ದಾರೆ. ಇವರಲ್ಲಿ ಮೂವರು ವೇಮುಲಾ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಎಚ್ಚೆತ್ತ ವೇಮುಲಾ ಪತ್ನಿ ಕಲ್ಯಾಣಿ ಅಡುಗೆ ಮನೆಗೆ ಓಡಿ ಹೋಗಿ ಖಾರದ ಪುಡಿ ತಂದು ದುಷ್ಕರ್ಮಿಗಳ ಕಣ್ಣಿಗೆ ಎರಚಿದ್ದಾಳೆ. ಜೊತೆಗೆ ನಮ್ಮನ್ನು ಕಾಪಾಡಿ ಎಂದು ಜೋರಾಗಿ ಕೂಗಿದ್ದಾಳೆ. ಈಕೆಯ ಚೀರಾಟ ಕೇಳಿ ನೆರೆ ಹೊರೆಯವರು ಕೂಡಲೇ ಸ್ಥಳಕ್ಕೆ ಬಂದಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ರಂಜಿತ್ ಕಣ್ಣಿಗೆ ಹೆಚ್ಚು ಕಾರದ ಪುಡಿ ಬಿದ್ದ ಪರಿಣಾಮ ಆತ ಅಲ್ಲಿಂದ ಪರಾರಿಯಾಗಲು ಸಾಧ್ಯವಾಗದೆ ಸಿಕ್ಕಿಬಿದ್ದಿದಾನೆ. ಉಳಿದ ಮೂವರು ಆರೋಪಿಗಳು ಆಟೋದಲ್ಲಿ ಪರಾರಿಯಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ರಂಜಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಲ್ಯಾಣಿ ಅವರ ಧೈರ್ಯ ಹಾಗೂ ಸಮಯ ಪ್ರಜ್ಞೆಯಿಂದ ತನ್ನ ಪತಿಯನ್ನು ಉಳಿಸಿಕೊಂಡಿದ್ದಾಳೆ.

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 7:21 PM IST

For All Latest Updates

TAGGED:

ABOUT THE AUTHOR

...view details