ಬೆಂಗಳೂರು:ಪ್ರತಿದಿನ ತನ್ನನ್ನು ಹೊಡೆಯುವ ಪತ್ನಿಯಿಂದ ರಕ್ಷಿಸಬೇಕೆಂದು ಸಹಾಯ ಕೋರಿ ಕರ್ನಾಟಕದ ವ್ಯಕ್ತಿಯೊಬ್ಬರು ಪ್ರಧಾನಿ (ಪಿಎಂಒ) ಕಚೇರಿಗೆ ದೂರು ನೀಡಿದ್ದಾರೆ. ತನಗೆ ಪತ್ನಿಯಿಂದ ಜೀವ ಬೆದರಿಕೆ ಇದೆ ಎಂದು ಪತಿ ಆರೋಪಿಸಿದ್ದಾರೆ.
ಬೆಂಗಳೂರಿನ ಯದುನಂದನ್ ಆಚಾರ್ಯ ಎಂಬುವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ದೂರನ್ನು ಪಿಎಂಒಗೆ ಕಳುಹಿಸಿದ್ದಾರೆ. ಈ ಕುರಿತು ತಾವು ಮಾಡಿದ ಟ್ವೀಟ್ ಅನ್ನು ಬೆಂಗಳೂರು ಪೊಲೀಸ್ ಮತ್ತು ಕೇಂದ್ರ ಕಾನೂನು ಸಚಿವರ ಟ್ವಿಟರ್ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.
'ಯಾರಾದರೂ ನನಗೆ ಸಹಾಯ ಮಾಡುತ್ತಾರೆಯೇ? ಅಥವಾ ಇದು ಸಂಭವಿಸಿದಾಗ ಯಾರಾದರೂ ನನಗೆ ಸಹಾಯ ಮಾಡಿದ್ದಾರೆಯೇ? ಇಲ್ಲ, ಏಕೆಂದರೆ ನಾನು ಪುರುಷ! ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದಳು, ಇದೇ ನೀವು ಬೆಂಬಲಿಸುವ ನಾರಿ ಶಕ್ತಿಯೇ? ಇದಕ್ಕಾಗಿ ನಾನು ಅವಳ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಬಹುದೇ? ಇಲ್ಲ! ...' ಎಂದು ಪತ್ನಿ ಸಂತ್ರಸ್ತ ಯದುನಂದನ್ ಆಚಾರ್ಯ ಟ್ವೀಟ್ನಲ್ಲಿ ಬರೆದಿದ್ದಾರೆ.