ಖಮ್ಮಂ(ತೆಲಂಗಾಣ): ಅತಿವೇಗವಾಗಿ ಬಂದ ಬಂದ ಹೊಸ ಪಲ್ಸರ್ ಬೈಕ್ ಸವಾರನ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಗೆ ನುಗ್ಗಿರುವ ಘಟನೆ ಖಮ್ಮಂನ ರವಿಚೆಟ್ಟು ಬಜಾರ್‌ನಲ್ಲಿ ನಡೆದಿದೆ. ಘಟನೆಯಿಂದ ಅಂಗಡಿ ಮಾಲೀಕ ಹಾಗೂ ಗ್ರಾಹಕರು ಬೆಚ್ಚಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ವೇಗವಾಗಿ ಬಂದು ಬಟ್ಟೆ ಅಂಗಡಿಯೊಳಗೆ ನುಗ್ಗಿದ ಹೊಸ ಪಲ್ಸರ್ ಬೈಕ್ - Video ಮೂರು ದಿನಗಳ ಹಿಂದೆ ನಡೆದಿರುವ ಅಪಘಾತ ತಡವಾಗಿ ಬೆಳಕಿಗೆ ಬಂದಿದೆ. ಬೈಕ್ ಅಂಗಡಿಗೆ ನುಗ್ಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೈಕ್ ನುಗ್ಗುವ ಮುನ್ನ ಅಂಗಡಿಯಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಕುಳಿತು ಮಾತನಾಡುತ್ತಿರುತ್ತಾರೆ. ಏಕಾಏಕಿ ಬೈಕ್ ತಮ್ಮತ್ತ ಬರುತ್ತಿರುವುದನ್ನ ಗಮನಿಸಿ ಕೂಡಲೇ ಪಕ್ಕಕ್ಕೆ ಸರಿದು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಬೈಕ್ ನುಗ್ಗಿದ ರಭಸಕ್ಕೆ ಸವಾರ ಪಲ್ಟಿಯಾಗಿ ಅಂಗಡಿಯೊಳಗೆ ಹೋಗಿ ಬೀಳುತ್ತಾನೆ. ಸದ್ಯ ಘಟನೆಯಲ್ಲಿ ಸವಾರ ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅತಿವೇಗದ ಚಾಲನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೈಕ್ ವಶಪಡಿಸಿಕೊಂಡಿದ್ದಾರೆ. ಬ್ರೇಕ್ ಫೇಲೂರ್ ಆದ ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.