ಅಮೇಥಿ (ಉತ್ತರ ಪ್ರದೇಶ):ಮಲವಿಸರ್ಜನೆಗೆ ತೆರಳಿದ್ದ 18 ವರ್ಷದ ಯುವತಿ ಮೇಲೆ ಅದೇ ಗ್ರಾಮದ ಯುವಕನೋರ್ವ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಮೊಹಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ಯುವತಿ ಮಲವಿಸರ್ಜನೆಗೆ ಹೋಗಿದ್ದಾಗ, ಆಕೆಯ ತಲೆಗೆ ದೊಣ್ಣೆಯಿಂದ ಹೊಡೆದು ಕಾಮುಕ ಕೃತ್ಯ ಎಸಗಿದ್ದಾನೆ.
ಇದನ್ನೂ ಓದಿ:8 ವರ್ಷ ಲವ್, ಸೆಕ್ಸ್, ದೋಖಾ.. ಬಾಲಿವುಡ್ ಖ್ಯಾತ ನಟಿಯ ಬಾಡಿಗಾರ್ಡ್ ವಿರುದ್ಧ ರೇಪ್ ಕೇಸ್
ಯುವತಿ ಮನೆಗೆ ಹಿಂತಿರುಗದಿರುವುದನ್ನು ಕಂಡ ಕುಟುಂಬಸ್ಥರು ಆಕೆಯನ್ನು ಹುಡುಕುತ್ತಾ ಹೋಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ. ಪರಾರಿಯಾಗಿರುವ ಆತನಿಗಾಗಿ ಬಲೆ ಬೀಸಿದ್ದಾರೆ.