ಕರ್ನಾಟಕ

karnataka

ETV Bharat / crime

ತಪಾಸಣೆಗೆ ಬಸ್​ ನಿಲ್ಲಿಸಿದಾಗ ಸೀಟ್​ ಅಡಿಯಲ್ಲಿದ್ದಳು ಅತ್ಯಾಚಾರ ಸಂತ್ರಸ್ತೆ...! - ತಪಾಸಣೆಗೆ ಬಸ್​ ನಿಲ್ಲಿಸಿದಾಗ ಸೀಟ್​ ಅಡಿಯಲ್ಲಿದ್ದಳು ಅತ್ಯಾಚಾರ ಸಂತ್ರಸ್ತೆ

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಸ್​ ಮೂಲಕ ಆಕೆಯನ್ನು ಬೇರೆಡೆಗೆ ಕರೆದೊಯ್ಯುವಾಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Rape victim found crouched under seat in bus, 3 held
ಅತ್ಯಾಚಾರ

By

Published : Jul 1, 2021, 11:41 AM IST

ಸುಲ್ತಾನ್​​​ಪುರ (ಉತ್ತರ ಪ್ರದೇಶ): ಖಾಸಗಿ ಐಷಾರಾಮಿ ಬಸ್​ವೊಂದನ್ನು ತಪಾಸಣೆಗಾಗಿ ಪೊಲೀಸರು ನಿಲ್ಲಿಸಿದಾಗ ಸೀಟ್​ ಅಡಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯನ್ನು ಕುಳ್ಳಿರಿಸಿರುವುದು ಕಂಡು ಬಂದಿದೆ. ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ಹಿನ್ನಲೆ

ಬಾಲಕಿಯ ಸಹೋದರಿ (ಮಲತಾಯಿಯ ಮಗಳು) ಔಷಧಗಳನ್ನು ಖರೀದಿಸುವ ನೆಪದಲ್ಲಿ ತನ್ನ ಮನೆಗೆ ಆಕೆಯನ್ನು ಕರೆಯಿಸಿಕೊಂಡಿದ್ದಾಳೆ. ಅಲ್ಲಿಂದ ಆಕೆಯನ್ನು ಶಿವ ಪೂಜನ್ ಸಿಂಗ್ ಎಂಬಾತನ ಮನೆಗೆ ಕರೆದೊಯ್ದು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಬಳಿಕ ಆಕೆಯನ್ನು ಬಸ್​ ಮೂಲಕ ಕರೆದೊಯ್ಯಲಾಗುತ್ತಿತ್ತು. ಈ ವೇಳೆ, ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನೇ ವೇಶ್ಯೆಯೆಂದು ಬಿಂಬಿಸಿದ ಆರೋಪ: ಪತಿ ವಿರುದ್ಧ ದಾಖಲಾಯ್ತು FIR

ಸಂತ್ರಸ್ತೆಯ ಸಹೋದರಿ, ಬಸ್​ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಅರೆಸ್ಟ್​ ಮಾಡಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಬಾಲಕಿಯನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಸುಲ್ತಾನಪುರ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ ತಿಳಿಸಿದ್ದಾರೆ.

ABOUT THE AUTHOR

...view details