ಕರ್ನಾಟಕ

karnataka

ETV Bharat / crime

ಮಂಗಳೂರಿನಲ್ಲಿ ನಿಯಂತ್ರಣ ತಪ್ಪಿ ಬೈಕ್‌, ವಾಹನಗಳಿಗೆ ಕಾರು ಡಿಕ್ಕಿ: ಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ - un controlled car hits two cars and bike in mangalore

ಮಂಗಳೂರಿನ ಉರ್ವ ಚಿಲಿಂಬಿ ಮಠದ ಕಣಿ ಕ್ರಾಸ್ ರೋಡ್‌ನಲ್ಲಿ ನಿಯಂತ್ರಣ ತಪ್ಪಿದ ಕಾರೊಂದಿಗೆ ಎರಡು ಕಾರು ಹಾಗೂ 1 ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

un controlled car hits two cars and bike in mangalore
ಚಾಲಕನ ನಿಯಂತ್ರಣ ತಪ್ಪಿ ಬೈಕ್‌, ವಾಹನಗಳಿಗೆ ಕಾರು ಡಿಕ್ಕಿ; ಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

By

Published : Feb 4, 2022, 1:52 PM IST

ಮಂಗಳೂರು:ಬ್ರೇಕ್ ಪೆಡಲ್‌ ಅಡಿ ನೀರಿನ ಬಾಟಲ್ ಸಿಲುಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು 1 ಬೈಕ್‌, ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಗಳೂರಿನಲ್ಲಿ ನಿಯಂತ್ರಣ ತಪ್ಪಿ ಬೈಕ್‌, ವಾಹನಗಳಿಗೆ ಕಾರು ಡಿಕ್ಕಿ; ಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

ನಗರದ ಉರ್ವ ಚಿಲಿಂಬಿ ಮಠದಕಣಿ ಕ್ರಾಸ್ ರೋಡ್‌ನಲ್ಲಿ ಈ ಘಟನೆ ನಡೆದಿದೆ. ವಿವೇಕಾನಂದ ಶೆಣೈ ಎಂಬವರು ಕಾರು ಚಲಾಯಿಸುತ್ತಿರಬೇಕಾದರೆ ಕಾರಿನ ಬ್ರೇಕ್ ಪೆಡಲ್‌ನಲ್ಲಿ ನೀರಿನ ಬಾಟಲ್ ಸಿಲುಕಿಕೊಂಡಿತ್ತು. ಕಾರಿಗೆ ಬ್ರೇಕ್ ಹಾಕಲು ಸಾಧ್ಯವಾಗದೇ ನಿಯಂತ್ರಣ ತಪ್ಪಿ ರಸ್ತೆಯ ಮತ್ತೊಂದು ಬದಿಗೆ ಬಂದು ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನ ಜಖಂ ಆಗಿದೆ. ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ

For All Latest Updates

TAGGED:

ABOUT THE AUTHOR

...view details