ಚೆನ್ನೈ(ತಮಿಳುನಾಡು):ವ್ಹೀಲಿಂಗ್ ಮಾಡುವುದು, ಅತಿ ವೇಗವಾಗಿ ಬೈಕ್ ಚಲಾಯಿಸುವುದು ಕೆಲವರಿಗೆ ಹುಮ್ಮಸ್ಸಿನ ವಿಷಯವಾಗಿರುತ್ತೆ. ಆದ್ರೆ ಅದು ತಮ್ಮ ಪ್ರಾಣಕ್ಕೆ ಕುತ್ತು ಎಂದು ಗೊತ್ತಿದ್ದರೂ ಅತಿವೇಗವಾಗಿ ಬೈಕ್ ಓಡಿಸಿದ ಯುವಕರಿಬ್ಬರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬೈಕ್ ಓಡಿಸುವಾಗ ಯುವಕರೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರವೀಣ್(19), ಹರಿ(17) ಮೃತರು. ಕಾಲೇಜು ಬಳಿಕ ಬೈಕ್ನಲ್ಲಿ ಇಬ್ಬರು ಹೊರಟಿದ್ದಾರೆ. ಸ್ವಲ್ಪ ಖಾಲಿ ಇದ್ದ ರಸ್ತೆ ಮೇಲೆ ಬೈಕ್ ಓಡಿಸುತ್ತಿದ್ದ ಪ್ರವೀಣ್ ರೇಸ್ ಹೆಚ್ಚಿಸುತ್ತಾನೆ. ಇದನ್ನು ಹಿಂದೆ ಕುಳಿತಿದ್ದ ಹರಿ ವಿಡಿಯೋ ಮಾಡಿದ್ದಾರೆ. ಜನರು ಓಡಾಡುವ ರಸ್ತೆಯಲ್ಲಿ ಇಬ್ಬರೂ ಸೇರಿ ಗಂಟೆಗೆ 115 ಕಿಮೀ ವೇಗದಲ್ಲಿ ಸಾಗಿದ್ದಾರೆ.