ಮಧುರೈ(ತಮಿಳುನಾಡು) :ವಿಚಾರಣೆಗೆ ಬಂದಿದ್ದ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳಿಗೆ ವ್ಯಕ್ತಿಯೊಬ್ಬ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಘಟನೆ ತಮಿಳುನಾಡಿನ ಮಧುರೈ ಸಮೀಪ ನಡೆದಿದೆ. ಮಹಿಳಾ ಪೊಲೀಸರಿಗೆ ಬೆದರಿಕೆ ಹಾಕಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಚಾರಣೆಗೆ ಬಂದಿದ್ದ ಇಬ್ಬರು ಮಹಿಳಾ ಪೊಲೀಸರಿಗೆ ಮಾರಕಾಸ್ತ್ರ ತೋರಿಸಿ ವ್ಯಕ್ತಿ ಬೆದರಿಕೆ.. ವಿಡಿಯೋ ವೈರಲ್ ಸೆಲ್ಲೂರು ಸಮೀಪದ ಮೀನಾಂಬಳಪುರಂನಲ್ಲಿ ಆರೋಪಿ ಪೆರುಮಾಳ್ ಹಾಗೂ ಆತನ ಪತ್ನಿ ನಡುವೆ ಕೌಟುಂಬಿಕ ಕಲಹವಾಗಿತ್ತು. ಹಿನ್ನೆಲೆಯಲ್ಲಿ ಈತನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ನಡೆಸಲು ಮಹಿಳಾ ಪೊಲೀಸರು ಮನೆ ಬಳಿ ಬಂದಿದ್ದಕ್ಕೆ ಸಿಟ್ಟಿಗೆದ್ದ ಪೆರುಮಾಳ್ ಪೊಲೀಸ್ ಸಿಬ್ಬಂದಿ ಸಂಗೀತಾ ಹಾಗೂ ಪೊನ್ನುತಾಯಿ ಎಂಬುವರಿಗೆ ಬೆದರಿಕೆ ಹಾಕಿದ್ದಾರೆ. ಘಟನೆ ಸಂಬಂಧ ಆರೋಪಿ ವಿರುದ್ಧ ಸೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಗುಜರಾತ್ ಕರಾವಳಿಯಲ್ಲಿ ಪಾಕ್ ಬೋಟ್ನಲ್ಲಿದ್ದ ₹400 ಕೋಟಿ ಮೌಲ್ಯದ ಹೆರಾಯಿನ್ ವಶ