ಕರ್ನಾಟಕ

karnataka

ETV Bharat / crime

ಉದ್ಯೋಗ ಪಡೆಯಲು ದಾಖಲೆ ನೀಡುವವರೇ ಎಚ್ಚರ ಎಚ್ಚರ ; ನಿಮ್ಮದೇ ಆಧಾರ್‌, ಪಾನ್‌ ಬಳಸಿ ಮೋಸ ಮಾಡ್ತಾರೆ - ಬೆಂಗಳೂರು

4 ಸಾವಿರ ಮುಗ್ಧ ಜನರ ಹೆಸರಲ್ಲಿ ಚೀನಾ ವಂಚಕರು ಕಂಪನಿ ತೆರೆದಿದ್ದಾರೆ ಎನ್ನುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜನರು ತಮ್ಮ ದಾಖಲಾತಿಗಳನ್ನು ನೀಡುವ ಮುನ್ನ ಇನ್ನಾದರೂ ಎಚ್ಚರಿಕೆ ವಹಿಸಬೇಕಿದೆ..

two online cheaters arrested in Bangalore
ಉದ್ಯೋಗ ಪಡೆಯಲು ದಾಖಲೆ ನೀಡುವವರೇ ಎಚ್ಚರ ಎಚ್ಚರ; ನಿಮ್ಮದೇ ಆಧಾರ್‌, ಪಾನ್‌ ಬಳಸಿ ಮೋಸ ಮಾಡ್ತಾರೆ!

By

Published : Sep 10, 2021, 10:11 PM IST

ಬೆಂಗಳೂರು :ಆನ್‌ಲೈನ್‌ನಲ್ಲಿ ವರ್ಕ್‌ ಫ್ರಂ ಹೋಮ್ ಕೆಲಸ ಕೊಡಿಸುವುದಾಗಿ ನಂಬಿಸಿ ದಾಖಲೆ ಪಡೆದು ಅವರದ್ದೇ ಹೆಸರಿನಲ್ಲಿ ಕಂಪನಿ ತೆರೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಇಬ್ಬರು ವಂಚಕರನ್ನು ಉತ್ತರ ವಿಭಾಗದ ಸಿಎಎನ್ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ. ಆರೋಪಿಗಳ ವಿವಿಧ ಬ್ಯಾಂಕ್‌ ಖಾತೆಗಳಿಂದ 3.5 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡು ಮೂಲದ ಸಂಜೀವ್, ಸೆನ್ನಪ್ಪನ್ ಬಂಧಿತ ಆರೋಪಿಗಳು. ಚೀನಾದ ವಂಚಕ ಹರ್ಮನ್ ಹಾಗೂ ತಮಿಳುನಾಡಿನ ಚಿತ್ರವೇಲುಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಉದ್ಯೋಗ ಖಾಲಿಯಿದೆ, ಮನೆಯಲ್ಲೇ ಕೂತು ಲಕ್ಷ ಲಕ್ಷ ಎಣಿಸುವ ಅದೃಷ್ಟ ನಿಮ್ಮದಾಗಲಿದೆ ಎಂದು ಜಾಹೀರಾತು ನೀಡುತ್ತಿದ್ದರು.

ನಿರುದೋಗ್ಯಿಗಳಿಂದ ಆಧಾರ್, ಪಾನ್‌ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದು ನಿರುದ್ಯೋಗಿಗಳ ಹೆಸರಿರಲ್ಲೇ ಕಂಪನಿ ತೆರೆದು ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಗ್ರಾಹಕರು ಹಣ ನೀಡುವಂತೆ ಹೇಳಿದಾಗ ಕಂಪನಿ‌ಯನ್ನು ಬಂದ್‌ ಮಾಡುತ್ತಿದ್ದ ಬಂಧಿತ ಆರೋಪಿಗಳು, ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಆರೋಪಿಗಳ ಹೆಸರಲ್ಲಿದ್ದ 11 ಕಂಪನಿಯ ಖಾತೆಗಳಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

4 ಸಾವಿರ ಮುಗ್ಧ ಜನರ ಹೆಸರಲ್ಲಿ ಚೀನಾ ವಂಚಕರು ಕಂಪನಿ ತೆರೆದಿದ್ದಾರೆ ಎನ್ನುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜನರು ತಮ್ಮ ದಾಖಲಾತಿಗಳನ್ನು ನೀಡುವ ಮುನ್ನ ಇನ್ನಾದರೂ ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ:ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ 84,000 ರೂ. ಹಣ ಕಳೆದುಕೊಂಡ ವ್ಯಕ್ತಿ

ABOUT THE AUTHOR

...view details