ಜಮ್ಮು ಮತ್ತು ಕಾಶ್ಮೀರ: ಜಮ್ಮುವಿನ ನರ್ವಾಲ್ ಮಾರುಕಟ್ಟೆಯಲ್ಲಿ ಬ್ರೇಕ್ ಫೇಲ್ ಆದ ಟ್ರಕ್ವೊಂದು ಅನೇಕ ವಾಹನಗಳಿಗೆ ಗುದ್ದಿದ್ದು, ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಸರಣಿ ಅಪಘಾತದಲ್ಲಿ ಮೂರು ಕಾರುಗಳು, ಆಟೋ, ಟೆಂಪೋ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.