ಫತೇಪುರ್/ಬಲ್ಲಿಯಾ:ಉತ್ತರ ಪ್ರದೇಶದ ಫತೇಪುರ್ ಹಾಗೂ ಬಲ್ಲಿಯಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ 70 ಹಾಗೂ 98 ವರ್ಷದ ವೃದ್ಧೆಯರ ಮೇಲೂ ಕಾಮುಕರು ಅತ್ಯಾಚಾರ ಎಸಗಿದ್ದಾರೆಂದರೆ ನಂಬಲೇಬೇಕಿದೆ. ಎರಡೂ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ -1
ಫತೇಪುರ್ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯೊಂದರ ಕಟ್ಟಡದಲ್ಲಿ ಪ್ರತಿನಿತ್ಯ ಮಲಗುತ್ತಿದ್ದ 70 ವರ್ಷದ ಭಿಕ್ಷುಕಿ ಮೇಲೆ 32 ವರ್ಷದ ವ್ಯಕ್ತಿ ಹೇಯ ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾರಿನಾವ್ ಠಾಣೆಯ ಪೊಲೀಸ್ ಅಧಿಕಾರಿ ನಂದಲಾಲ್ ಸಿಂಗ್ ತಿಳಿಸಿದ್ದಾರೆ.