ಕರ್ನಾಟಕ

karnataka

ETV Bharat / crime

ಸರ್ಜಿಕಲ್​ ಸ್ಪಿರಿಟ್​ ಕುಡಿದು ಕೇರಳದಲ್ಲಿ ಇಬ್ಬರು ಸಾವು.. ಇಬ್ಬರ ಸ್ಥಿತಿ ಗಂಭೀರ

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸರ್ಜಿಕಲ್​ ಸ್ಪಿರಿಟ್ ತೆಗೆದುಕೊಂಡು ಅದನ್ನು ನೀರಿನಲ್ಲಿ ಬೆರೆಸಿ ತನ್ನ ಸ್ನೇಹಿತರೊಂದಿಗೆ ಸೇವಿಸಿದ್ದಾನೆ. ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

Two die, two critical after consuming surgical spirit in Kerala's Kollam
ಸರ್ಜಿಕಲ್​ ಸ್ಪಿರಿಟ್​ ಕುಡಿದು ಕೇರಳದಲ್ಲಿ ಇಬ್ಬರು ಸಾವು

By

Published : Jun 17, 2021, 11:01 AM IST

ಕೊಲ್ಲಂ (ಕೇರಳ): ಸರ್ಜಿಕಲ್​ ಸ್ಪಿರಿಟ್​ ಕುಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಪಥನಪುರಂನಲ್ಲಿ ನಡೆದಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ತಿರುವನಂತಪುರಂ ವೈದ್ಯಕೀಯ ಕಾಲೇಜು- ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ಮುರುಕಾನಂದನ್ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ. ಪಥನಪುರಂನ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮುರುಕಾನಂದನ್ ಮಂಗಳವಾರ ಸರ್ಜಿಕಲ್​ ಸ್ಪಿರಿಟ್ ತೆಗೆದುಕೊಂಡು ಅದನ್ನು ನೀರಿನಲ್ಲಿ ಬೆರೆಸಿ ತನ್ನ ಸ್ನೇಹಿತರೊಂದಿಗೆ ಸೇವಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸಾದ್ ಮಾರ್ಗಮಧ್ಯೆ ಸಾವನ್ನಪ್ಪಿದ್ದರೆ, ಮುರುಕಾನಂದನ್ ಚಿಕತ್ಸೆ ವೇಳೆ ಅಸು ನೀಗಿದ್ದಾನೆ. ಘಟನೆ ಸಂಬಂಧ ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಸರ್ಜಿಕಲ್​ ಸ್ಪಿರಿಟ್, ಇದನ್ನು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯ ಮೊದಲು ಚರ್ಮ ಅಥವಾ ವೈದ್ಯಕೀಯ ಉಪಕರಣಗಳನ್ನು ಸ್ವಚ್ಛಗೊಳಿಸಲು ಮತ್ತು ಸೋಂಕುನಿವಾರಕವಾಗಿ ಬಳಸಲಾಗುತ್ತದೆ.

ABOUT THE AUTHOR

...view details