ಕರ್ನಾಟಕ

karnataka

ETV Bharat / crime

ಮನೆ ಮುಂದೆ ಆಟವಾಡುತ್ತಿದ್ದ ಮಾಜಿ ಶಾಸಕನ ಮೊಮ್ಮಕ್ಕಳಿಬ್ಬರು ನಾಪತ್ತೆ.. ಆತಂಕದಲ್ಲಿ ಕುಟುಂಬ! - ರಾಯಚೂರು ಸುದ್ದಿ,

ಮನೆ ಮುಂದೆ ಆಟವಾಡುತ್ತಿದ್ದ ಮಾಜಿ ಶಾಸಕನ ಮೊಮ್ಮಕ್ಕಳಿಬ್ಬರು ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

Two brothers are missing, Two brothers are missing in Raichur, Raichur news, Raichur crime news, ಇಬ್ಬರು ಸಹೋದರರು ನಾಪತ್ತೆ, ರಾಯಚೂರಿನಲ್ಲಿ ಇಬ್ಬರು ಸಹೋದರರು ನಾಪತ್ತೆ, ರಾಯಚೂರು ಸುದ್ದಿ, ರಾಯಚೂರು ಅಪರಾಧ ಸುದ್ದಿ,
ಅಣ್ಣ, ತಮ್ಮ ಇಬ್ಬರು ಮಕ್ಕಳ ಕಾಣೆ

By

Published : Mar 8, 2021, 7:25 AM IST

Updated : Mar 8, 2021, 10:00 AM IST

ರಾಯಚೂರು: ಮನೆಯ ಮುಂದೆ ಆಟವಾಡುತ್ತಿದ್ದ ಸಹೋದರರಿಬ್ಬರು ಕಾಣೆಯಾಗಿರುವ ಘಟನೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಾನಂದ ಎನ್ನುವ 9 ವರ್ಷದ ವರುಣ, 5 ವರ್ಷದ ಸಣ್ಣಯ್ಯ ಸಹೋದರರಿಬ್ಬರು ನಿನ್ನೆ ಸಂಜೆ ವೇಳೆ ಕಾಣೆಯಾಗಿದ್ದಾರೆ. ಮನೆಯ ಮುಂದೆ ಇಬ್ಬರು ಸಹೋದರರು ಆಟವಾಡುತ್ತಿದ್ದರು. ಏಕಾಏಕಿ ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ.

ಸಿರವಾರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಬಾಲಕರಿಬ್ಬರನ್ನ ಹುಡಕಾಟ ನಡೆಸುತ್ತಿದ್ದಾರೆ. ಕಾಣೆಯಾಗಿದ್ದ ಇಬ್ಬರು ಬಾಲಕರು ಮಾಜಿ ಶಾಸಕ ಹಂಪಯ್ಯ ನಾಯಕ ಮೊಮ್ಮಕ್ಕಳಾಗಿದ್ದಾರೆ. ಮಕ್ಕಳ ಪತ್ತೆಗಾಗಿ ಸಹಕರಿಸುವಂತೆ ಪೋಟೋವನ್ನ ವಾಟ್ಸ್​​ಆ್ಯಪ್​​​​ನಲ್ಲಿ ಹರಿ ಬಿಡಲಾಗಿದೆ.

ಬಾಲಕರಿಬ್ಬರು ಎಲ್ಲಿಯಾದರೂ ಕಂಡು ಬಂದರೆ ಸಿರವಾರ ಪೊಲೀಸ್ ಠಾಣೆ ಅಥವಾ ಈ ನಂಬರ್​ಗೆ (9741434220) ಕರೆ ಮಾಡುವಂತೆ ಕೋರಲಾಗಿದೆ.

Last Updated : Mar 8, 2021, 10:00 AM IST

ABOUT THE AUTHOR

...view details