ಕರ್ನಾಟಕ

karnataka

ETV Bharat / crime

ಆಂಧ್ರಪ್ರದೇಶ : ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ; ನಾಲ್ವರ ದಾರುಣ ಸಾವು - Car plunged into the pond Four killed in gunturu district andra pradesh

ಕಾರು ಕೆರೆಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಕಾರಿನ ಗಾಜುಗಳನ್ನು ಒಡೆದು ಅದರೊಳಗಿದ್ದ ನಾಲ್ವರನ್ನು ಹೊರ ತೆಗೆದಿದ್ದಾರೆ. ಆದರೆ, ಆ ವೇಳೆಗಾಗಲೇ ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ..

Tragedy: Car plunged into the pond.. Four killed
ಆಂಧ್ರಪ್ರದೇಶ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು; ನಾಲ್ವರ ದಾರುಣ ಸಾವು

By

Published : Jan 18, 2022, 1:27 PM IST

ಗುಂಟೂರು :ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಕೆರೆಗೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಯರ್ರಬಾಲೆಂ ತಿರುವುನಲ್ಲಿ ನಡೆದಿದೆ.

ನಿನ್ನೆ ರಾತ್ರಿ ಈ ಅಪಘಾತ ನಡೆದಿದೆ. ಸಾಯಿ, ಶ್ರೀನಿವಾಸ್, ನರೇಂದ್ರಕುಮಾರ್ ಹಾಗೂ ತೇಜರಾಮ್‌ಜಿ ಎಂಬುವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳು.

ಕಾರು ಕೆರೆಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಕಾರಿನ ಗಾಜುಗಳನ್ನು ಒಡೆದು ಅದರೊಳಗಿದ್ದ ನಾಲ್ವರನ್ನು ಹೊರ ತೆಗೆದಿದ್ದಾರೆ. ಆದರೆ, ಆ ವೇಳೆಗಾಗಲೇ ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಾಯಿ, ಶ್ರೀನಿವಾಸ್, ನರೇಂದ್ರ ಕುಮಾರ್ ಅವರು ಮಂಗಳಗಿರಿ ಮೂಲದವರಾಗಿದ್ದರೆ, ತೇಜರಾಮ್‌ಜಿ ಯರ್ರಬಾಲೆಂನವರು ಎಂದು ಪೊಲೀಸರು ಗುರುತಿಸಿದ್ದಾರೆ.

ಇದನ್ನೂ ಓದಿ:ವಾರ್ಡರ್‌ಗೆ ಹೆದರಿ ಮೊಬೈಲ್‌ ನುಂಗಿದ ಕೈದಿ ; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ತೆಗೆದ ವೈದ್ಯರು

For All Latest Updates

TAGGED:

ABOUT THE AUTHOR

...view details