ವಯನಾಡು (ಕೇರಳ): ಪ್ರವಾಸಕ್ಕೆಂದು ಬಂದಿದ್ದ ಯುವತಿಯ ಮೇಲೆ ಆನೆ ದಾಳಿ ನಡೆಸಿ ಕೊಂದಿರುವ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ.
ಕೇರಳದ ಕಣ್ಣೂರಿನ ಚೆಲೇರಿ ಮೂಲದ ಶಹಾನ್ (26) ಎಂಬ ಯುವತಿ ವಯನಾಡಿಗೆ ಬಂದಿದ್ದಳು. ಈಕೆಗೆ ಮೆಪ್ಪಾಡಿ ಪಟ್ಟಣದಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ಟೆಂಟ್ ಹಾಕಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಟೆಂಟ್ ಬಳಿ ಈಕೆಯ ಮೇಲೆ ಆನೆ ದಾಳಿ ಮಾಡಿದೆ.