ಕರ್ನಾಟಕ

karnataka

ETV Bharat / crime

ಹೊತ್ತಿ ಉರಿದ ಗ್ರಾಮ: ಮೂವರ ಸಜೀವ ದಹನ.. 20 ಮನೆಗಳು ಸುಟ್ಟು ಭಸ್ಮ - ಸಮಸ್ತಿಪುರ ಜಿಲ್ಲೆಯ ಚಕ್ಕನ್ ಟೋಲಿ ಎಂಬ ಗ್ರಾಮದಲ್ಲಿ ಅಗ್ನಿ ಅವಘಡ

ಬಿಹಾರದ ಗ್ರಾಮವೊಂದರಲ್ಲಿ ಬೆಂಕಿ ಅನಾಹುತ ನಡೆದು 8 ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

samastipur
ಮೂವರ ಸಜೀವ ದಹನ

By

Published : Apr 3, 2021, 10:48 AM IST

ಸಮಸ್ತಿಪುರ (ಬಿಹಾರ): ಸಮಸ್ತಿಪುರ ಜಿಲ್ಲೆಯ ಚಕ್ಕನ್ ಟೋಲಿ ಎಂಬ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ಮೂವರ ಮೃತಪಟ್ಟಿದ್ದು, 20 ಮನೆಗಳು ಹಾಗೂ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಮನೆಗಳು ಸುಟ್ಟು ಭಸ್ಮ

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಗ್ರಾಮಸ್ಥರೆಲ್ಲರೂ ಮಲಗಿದ್ದ ವೇಳೆ ಘಟನೆ ನಡೆದಿದೆ. ಬೆಂಕಿಯ ಜ್ವಾಲೆ ಕಾಣಿಸುತ್ತಿದ್ದಂತೆಯೇ ಎಲ್ಲರೂ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಆದರೆ, ಗಾಢ ನಿದ್ರೆಯಲ್ಲಿದ್ದ ಒಂದು ಮನೆಯ ಮೂವರು ಮಾತ್ರ ಸಜೀವವಾಗಿ ದಹಿಸಿದ್ದಾರೆ.

ಇದನ್ನೂ ಓದಿ: ಗುಂಡಿನ ಮತ್ತಲ್ಲಿ ದುಷ್ಕೃತ್ಯ: ಕೊಡಗಿನಲ್ಲಿ ಮೂರು ಜನರ ಸಜೀವ ದಹನ, ಮೂವರ ಸ್ಥಿತಿ ಗಂಭೀರ

ಮೃತರನ್ನು ಕಿಸುನ್ ದೇವಿ (65), ಸಂಗೀತಾ ದೇವಿ (28) ಹಾಗೂ ಗಂಗಾ ಕುಮಾರಿ (8) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಕಲ್ಯಾಣ್​ಪುರ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ABOUT THE AUTHOR

...view details