ಕರ್ನಾಟಕ

karnataka

ETV Bharat / crime

ಕಳ್ಳತನಕ್ಕೆ ಬಂದವರಿಂದ ಕೊರೊನಾ ಸೋಂಕಿತೆ ಮೇಲೆ ಸಾಮೂಹಿಕ ಅತ್ಯಾಚಾರ! - Madhya pradesh rape case

ತಾನು ಕೊರೊನಾ ಸೋಂಕಿತೆ ಎಂದು ಮಹಿಳೆ ಹೇಳಿದರೂ ಮಾತು ಕೇಳದೆ ಕಳ್ಳತನ ಮಾಡಲೆಂದು ಮನೆಗೆ ನುಗ್ಗಿದ್ದ ಖದೀಮರು ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ.

indore
ಕೊರೊನಾ ಸೋಂಕಿತೆ ಮೇಲೆ ಸಾಮೂಹಿಕ ಅತ್ಯಾಚಾರ

By

Published : May 15, 2021, 11:02 AM IST

ಇಂದೋರ್ (ಮಧ್ಯಪ್ರದೇಶ): ಕಳ್ಳತನ ಮಾಡಲೆಂದು ಮನೆಯೊಂದಕ್ಕೆ ನುಗ್ಗಿದ ಖದೀಮರು, ಹಣ ದೋಚಿದ್ದಲ್ಲದೆ ಒಬ್ಬಂಟಿಯಾಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಮನೆಗೆ ನುಗ್ಗಿದ ಮೂವರು ಕಳ್ಳರು ಮಹಿಳೆಗೆ ಚಾಕು ತೋರಿಸಿ, 50 ಸಾವಿರ ರೂ. ಹಣವನ್ನು ಎಗರಿಸಿದ್ದಾರೆ. ತಾನು ಕೊರೊನಾ ಸೋಂಕಿತೆ ಎಂದರೂ ಕೇಳದೆ ಆಕೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಕೋವಿಡ್​ ಸೋಂಕಿತೆ ಮೇಲೆ ನರ್ಸ್​ನಿಂದಲೇ ಅತ್ಯಾಚಾರ: 24 ಗಂಟೆಗಳಲ್ಲೇ ಸಂತ್ರಸ್ತೆ ಸಾವು

ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತಾನು ಕೋವಿಡ್​ ಸೋಂಕಿಗೆ ಒಳಗಾಗಿ ಹೋಂ ಕ್ವಾರಂಟೈನ್​ ಆಗಿದ್ದೆ ಎಂದು ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವನಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details