ಕರ್ನಾಟಕ

karnataka

ETV Bharat / crime

24 ಗಂಟೆಗಳಲ್ಲಿಯೇ ಮನೆ ಕಳ್ಳತನ ಪ್ರಕರಣ ಬೇಧಿಸಿದ ಉಪನಗರ ಠಾಣೆ ಪೊಲೀಸರು - HUBBLLI_ DHARAWAD

ದೇಶಪಾಂಡೆನಗರದ ಅಪಾರ್ಟಮೆಂಟ್​​​ನಲ್ಲಿ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಧರ್ಮರಾಮ್ ಧರ್ಮೆಂದ್ರ ಗೋವರ್ಧನರಾಮ್ ಚೌಧರಿ ಎಂಬುವವನೇ ಬಂಧಿತ ಆರೋಪಿ.

thieves attest in Hubli
thieves attest in Hubli

By

Published : May 5, 2021, 8:53 PM IST

ಹುಬ್ಬಳ್ಳಿ:ಕೆಲಸ ಮಾಡುವ ಮನೆಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದ ಚಾಲಾಕಿ ಕಳ್ಳನನ್ನು 24 ಗಂಟೆಗಳಲ್ಲಿಯೇ ಹೆಡೆಮುರಿ ಕಟ್ಟುವಲ್ಲಿ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ದೇಶಪಾಂಡೆನಗರದ ಅಪಾರ್ಟ್​​​ಮೆಂಟ್​​​ನಲ್ಲಿ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಧರ್ಮರಾಮ್ ಧರ್ಮೆಂದ್ರ ಗೋವರ್ಧನರಾಮ್ ಚೌಧರಿ ಎಂಬುವವನೇ ಬಂಧಿತ ಆರೋಪಿ.
ಇನ್ನೂ ಹುಬ್ಬಳ್ಳಿ ದೇಶಪಾಂಡೆ ನಗರದ ಗುರು ಅಪಾರ್ಟಮೆಂಟ್​​​ನ ಮಹೇಶ ಎಂಬುವವರ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿ, 4,75,000 ಹಣವನ್ನು ದೋಚಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನ ಬಂಧನಕ್ಕೆ ಬಲೆ ಬಿಸಿದ್ದ ಪೊಲೀಸರು 24 ಗಂಟೆಯಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ 4 ಲಕ್ಷ 73 ಸಾವಿರ ನಗದು ವಶಕ್ಕೆ ಪಡೆದಿದ್ದು, ಹಣ ಹಾಕಿಕೊಂಡು ಇಟ್ಟಿದ್ದ ಬಿಳಿ ಬಣ್ಣದ ಬ್ಯಾಗ್ ಸಮೇತ ಪತ್ತೆ ಮಾಡಿದ್ದಾರೆ.

ABOUT THE AUTHOR

...view details