ಕರ್ನಾಟಕ

karnataka

ETV Bharat / crime

ಜಮ್ಮುಕಾಶ್ಮೀರದಲ್ಲಿ ದಾಳಿ ನಡೆಸಲು ಉಗ್ರರಿಂದ ಮಸೀದಿಗಳ ದುರುಪಯೋಗ: ಐಜಿಪಿ - ಜಮ್ಮು ಮತ್ತು ಕಾಶ್ಮೀರದ ಪಾಂಪೋರ್, ಸೋಪೋರ್ ಮತ್ತು ಶೋಪಿಯಾನ್

ಪಾಂಪೋರ್, ಸೋಪೋರ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಉಗ್ರರು ಮಸೀದಿಗಳಲ್ಲಿ ಅಡಗಿ ಆಶ್ರಯ ಪಡೆದಿದ್ದರು ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.

Inspector General of Police Kashmir Vijay Kumar
ಕಾಶ್ಮೀರದ ಐಜಿಪಿ ವಿಜಯ್ ಕುಮಾರ್

By

Published : Apr 12, 2021, 11:07 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಾಂಪೋರ್, ಸೋಪೋರ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ದಾಳಿ ನಡೆಸಲು ಉಗ್ರರು ಮಸೀದಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

2020ರ ಜೂನ್ 19 ರಂದು ಪಾಂಪೋರ್, 2020ರ ಜುಲೈ 1 ರಂದು ಸೋಪೋರ್ ಮತ್ತು 2021 ರ ಏಪ್ರಿಲ್ 9 ರಂದು ಶೋಪಿಯಾನ್​ನಲ್ಲಿ ನಡೆದ ದಾಳಿಗೆ ಭಯೋತ್ಪಾದಕರು ಮಸೀದಿಗಳನ್ನು ದುರುಪಯೋಗ ಮಾಡಿಕೊಂಡಿದ್ದರು. ಸಾರ್ವಜನಿಕರು, ಮಸೀದಿ ಆಡಳಿತ ಹಾಗೂ ಮಾಧ್ಯಮಗಳು ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂದು ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಬಸ್ ನಿಲ್ದಾಣದ ಮುಂದೆ ನಿಂತಿದ್ದವರ ಮೇಲೆ ಹರಿದ ಲಾರಿ : ಬಾಲಕಿ ಸಾವು, ನಾಲ್ವರ ಸ್ಥಿತಿ ಗಂಭೀರ

ಪಾಂಪೋರ್​ನಲ್ಲಿ ಮೂವರು, ಶೋಪಿಯಾನ್​ನಲ್ಲಿ ಐವರು ಉಗ್ರರನ್ನು ಅಂದು ಹೊಡೆದುರುಳಿಸಲಾಗಿತ್ತು. ಸೋಪೋರ್​ನಲ್ಲಿ ಉಗ್ರರ ದಾಳಿಯಲ್ಲಿ ಒಬ್ಬ ಯೋಧ ಹಾಗೂ ಓರ್ವ ನಾಗರಿಕ ಪ್ರಾಣತೆತ್ತಿದ್ದರು. ಈ ಉಗ್ರರೆಲ್ಲರೂ ಮಸೀದಿಗಳಲ್ಲಿ ಅಡಗಿ ಆಶ್ರಯ ಪಡೆದಿದ್ದರು ಎಂದು ಐಜಿಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details