ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ವಿಮಾನ ನಿಲ್ದಾಣದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶೇರ್ ಅಲಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಪೂಂಚ್ನ ರ್ಗ್ಲೂನ್ ನಿವಾಸಿಯಾದ ಶೇರ್ ಅಲಿ, ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಭಾರತದ ಒಳನುಸುಳಲು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆ ಮಾಡಲು, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಕೆ)ದಿಂದ ಪೂಂಚ್ ಜಿಲ್ಲೆಯ ಬಾಲಕೋಟೆಗೆ ಮಾದಕ ವಸ್ತುಗಳನ್ನು ಸಾಗಿಸಲು ಸಹಾಯ ಮಾಡುತ್ತಿದ್ದನು.
ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, 2020 ರ ನವೆಂಬರ್ನಲ್ಲಿ ಇಬ್ಬರು ಪಾಕಿಸ್ತಾನ ಉಗ್ರರನ್ನು ಬಾಲಾಕೋಟ್ಗೆ ಕಳುಹಿಸಲು ಭಾಗಿಯಾಗಿದ್ದ ಆರೋಪದಡಿ ಇದೀಗ ಬಂಧಿಸಲಾಗಿದೆ.