ನೆಲ್ಲೋರ್ (ಆಂಧ್ರ ಪ್ರದೇಶ): ಮಹಿಳೆಯ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯರು 15 ಲಕ್ಷ ರೂ ಪರಿಹಾರ ನೀಡಬೇಕು ಎಂದು ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಜಿಂಕಾರೆಡ್ಡಿ ಶೇಖರ್ ಬುಧವಾರ ತೀರ್ಪು ನೀಡಿದ್ದಾರೆ.
ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಗೆ ಈ ಆದೇಶ ಅನ್ವಯಿಸಲಿದೆ. ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯ ಹೊಟ್ಟೆಯಲ್ಲಿ ಕಾಟನ್ ಸ್ಪಾಂಜ್ ಹಾಗೇ ಬಿಟ್ಟು ಹೊಲಿಗೆ ಹಾಕಿದ ಪ್ರಕರಣ ಇದಾಗಿದೆ.
ಎಎಸ್ ಪೇಟಾದ ಫಾತೆಮ್ ಎಂಬುವರ ಪತ್ನಿ ಶೇಖ್ ರಸಿಲಾ ಭಾನು ಹೆರಿಗೆಗಾಗಿ ವೆಲ್ಲೂರು ಸಿಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 27, 2015 ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಡಿಸ್ಚಾರ್ಜ್ ಆಗಿ ಮನೆಗೆ ಹೋದ ನಂತರ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆದರೆ ಹೈದರಾಬಾದ್, ವಿಜಯವಾಡ, ವೆಲ್ಲೂರು ಮತ್ತು ಇತರ ನಗರಗಳ ಒಂಬತ್ತು ಆಸ್ಪತ್ರೆಗಳಲ್ಲಿ ಸುಮಾರು ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದರೂ ಏನೂ ಉಪಯೋಗವಾಗಿರಲಿಲ್ಲ.
ಅಂತಿಮವಾಗಿ ಜೂನ್ 17, 2017 ರಂದು ನೆಲ್ಲೂರು ಕಿಮ್ಸ್ (ಬೊಳ್ಳಿನೇನಿ) ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿನ ವೈದ್ಯರು ಪರೀಕ್ಷಿಸಿ ಹೊಟ್ಟೆಯಲ್ಲಿ 18x17 ಸೆಂ.ಮೀ ಗಾತ್ರದ ಗಡ್ಡೆ ಇರುವುದನ್ನು ಪತ್ತೆ ಮಾಡಿ, ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ಹೊರತೆಗೆದಿದ್ದರು.
ಹೊಟ್ಟೆಯಲ್ಲಿತ್ತು ಸ್ಪಾಂಜ್:ಹೆರಿಗೆಗಾಗಿ ವೆಲ್ಲೂರು ಸಿಎಂಸಿ ಆಸ್ಪತ್ರೆಗೆ ದಾಖಲಾದಾಗ ಶಸ್ತ್ರಚಿಕಿತ್ಸೆ ಸಮಯದಲ್ಲಿ ರಸಿಲಾ ಅವರ ಹೊಟ್ಟೆಯಲ್ಲಿ ಕಾಟನ್ ಸ್ಪಾಂಜ್ ಹಾಗೇ ಬಿಟ್ಟು ಹೊಲಿಗೆ ಹಾಕಲಾಗಿತ್ತು ಎಂಬುದು ಬೆಳಕಿಗೆ ಬಂದಿತ್ತು. ಇದರಿಂದಲೇ ಗಡ್ಡೆ ಬೆಳೆದು ಮಹಿಳೆಗೆ ಹೊಟ್ಟೆನೋವು ಶುರುವಾಗಿತ್ತು.
ಇದಾದ ನಂತರ ರಸಿಲಾ ಭಾನು ಅವರು ನೆಲ್ಲೂರು ಗ್ರಾಹಕರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ತಮಗೆ 19.90 ಲಕ್ಷ ರೂಪಾಯಿ ಪರಿಹಾರ ಕೊಡಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು. ರಸಿಲಾ ಅವರ ಹೊಟ್ಟೆಯಲ್ಲಿ ಹತ್ತಿ ಸ್ಪಾಂಜ್ ಬಿಟ್ಟು ಹೊಲಿಗೆ ಹಾಕಲಾಗಿದೆ ಎಂಬ ತೀರ್ಮಾನಕ್ಕೆ ಬಂದ ನಂತರ, ಸಿಎಂಸಿ ಆಸ್ಪತ್ರೆ ಆಡಳಿತ ಮಂಡಳಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಆಯೋಗದ ಅಧ್ಯಕ್ಷ ಜಿಂಕಾರೆಡ್ಡಿ ಶೇಖರ್ ಆದೇಶಿಸಿದ್ದಾರೆ.
ಪ್ರಸವಕ್ಕೆ ಸಂಬಂಧಿಸಿದಂತೆ ಸಿಎಂಸಿ ಆಸ್ಪತ್ರೆಯ ಸ್ಪಾಂಜ್ ಖಾತೆ ದಾಖಲೆಯನ್ನು ಗ್ರಾಹಕ ಆಯೋಗ ಪರಿಗಣಿಸಿದೆ. ರಶೀಲಾ ಅವರ ಹೊಟ್ಟೆಯಲ್ಲಿ ಹತ್ತಿ ಸ್ಪಾಂಜ್ ಬಿಟ್ಟು ಹೊಲಿಗೆ ಹಾಕಲಾಗಿದೆ ಎಂಬ ತೀರ್ಮಾನಕ್ಕೆ ಬಂದ ನಂತರ ಸಿಎಂಸಿ ಆಸ್ಪತ್ರೆ ಆಡಳಿತ ಮಂಡಳಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಆಯೋಗದ ಅಧ್ಯಕ್ಷ ಜಿಂಕಾರೆಡ್ಡಿ ಶೇಖರ್ ಆದೇಶಿಸಿದರು. ಈ ಮೊತ್ತವನ್ನು 45 ದಿನಗಳಲ್ಲಿ ಪಾವತಿಸದಿದ್ದರೆ, ತೀರ್ಪು ನೀಡಿದ ದಿನಾಂಕದಿಂದ ಶೇಕಡಾ 9 ರಷ್ಟು ಬಡ್ಡಿಯೊಂದಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ದಂಡದ ಮೊತ್ತವನ್ನು 45 ದಿನಗಳಲ್ಲಿ ಪಾವತಿಸದಿದ್ದರೆ, ತೀರ್ಪು ನೀಡಿದ ದಿನಾಂಕದಿಂದ ಶೇಕಡಾ 9 ರಷ್ಟು ಬಡ್ಡಿ ಸೇರಿಸಿ ದಂಡ ನೀಡಬೇಕು ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ: ಉಬರ್ ಚಾಲಕನ ನಿರ್ಲಕ್ಷ್ಯದಿಂದ ವಿಮಾನ ತಪ್ಪಿಸಿಕೊಂಡ ಮಹಿಳೆ: ಗ್ರಾಹಕ ನ್ಯಾಯಾಲಯದಿಂದ ದಂಡ