ಕರ್ನಾಟಕ

karnataka

ETV Bharat / crime

ಟ್ರಕ್​ ಹರಿಸಿ ಸಬ್​ ಇನ್ಸ್​ಪೆಕ್ಟರ್​ ಹತ್ಯೆ - police murder

ಕುಡಿದುಕೊಂಡು ಬೀದಿಗಳಲ್ಲಿ ಅನುಚಿತವಾಗಿ ವರ್ತಿಸಿರುವುದಕ್ಕೆ ಎಚ್ಚರಿಕೆ ನೀಡಿದ ಪೊಲೀಸ್​ ಅಧಿಕಾರಿಯನ್ನು ಕೊಲೆ ಮಾಡಲಾಗಿದೆ.

Sub Inspector brutally killed in Thoothukudi
ಟ್ರಕ್​ ಹರಿಸಿ ತೂತುಕುಡಿಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಹತ್ಯೆ

By

Published : Feb 1, 2021, 2:19 PM IST

ತೂತುಕುಡಿ (ತಮಿಳುನಾಡು): ಕ್ಷುಲ್ಲಕ ಕಾರಣಕ್ಕೆ ತಮಿಳುನಾಡಿನ ತೂತುಕುಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​​ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಹಂತಕನ ಪತ್ತೆಗೆ 10 ಸದಸ್ಯರ ವಿಶೇಷ ಪೊಲೀಸ್​ ತಂಡವನ್ನು ರಚಿಸಲಾಗಿದೆ.

ಶ್ರೀ ವೈಕುಂಠಂ ಪೊಲೀಸ್​ ಠಾಣೆಯ ಬಾಲು ಕೊಲೆಯಾದ ಸಬ್​ ಇನ್ಸ್​ಪೆಕ್ಟರ್ ಆಗಿದ್ದಾರೆ. ಬಾಲು ತಡರಾತ್ರಿ ಗಸ್ತು ತಿರುಗುತ್ತಿದ್ದಾಗ ಅವರ ಮೇಲೆ ಮುರುಗವೇಲ್ ಎಂಬ ವ್ಯಕ್ತಿ ಸರಕು ಸಾಗಣೆ ಟ್ರಕ್​ ಹರಿಸಿ ಹತ್ಯೆ ಮಾಡಿದ್ದಾನೆ.

ಕೊಲೆಗಾರ ಮುರುಗವೇಲ್

ಇದನ್ನೂ ಓದಿ: ಆಟವಾಡುತ್ತಿದ್ದಾಗ ಸ್ಫೋಟಗೊಂಡ ಬಾಂಬ್​... ಮೂವರು ಮಕ್ಕಳಿಗೆ ಗಾಯ!

ಮುರುಗವೇಲ್ ಕುಡಿದುಕೊಂಡು ಬೀದಿಗಳಲ್ಲಿ ಅನುಚಿತವಾಗಿ ವರ್ತಿಸಿರುವುದನ್ನು ಕಂಡ ಸಬ್​ ಇನ್ಸ್​ಪೆಕ್ಟರ್ ಬಾಲು, ಆತನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಮುರುಗವೇಲ್ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಈತನನ್ನು ಬಂಧಿಸಲು ಎಸ್‌ಪಿ ಜಯಕುಮಾರ್ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details