ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿದ ಪಾಪಿ ತಮ್ಮ: ಬೆಚ್ಚಿ ಬಿದ್ದ ಜನ - muder
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಮ್ಮಿಹಾಳ ನಿವಾಸಿಯಾದ ಮೈಲಾರಿ ತಿರ್ಲಾಪುರ (39) ಮೃತ ದುರ್ದೈವಿ. ಮೈಲಾರಿಯ ಚಿಕ್ಕಪ್ಪನ ಮಗ ರವಿ ತಿರ್ಲಾಪುರ ಎಂಬುವವನೇ ಆಸ್ತಿ ವಿಚಾರವಾಗಿ ಅಣ್ಣನನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
![ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿದ ಪಾಪಿ ತಮ್ಮ: ಬೆಚ್ಚಿ ಬಿದ್ದ ಜನ stunning murder in City of hubli](https://etvbharatimages.akamaized.net/etvbharat/prod-images/768-512-11521431-956-11521431-1619253297494.jpg)
ಹುಬ್ಬಳ್ಳಿ:ಆಸ್ತಿ ವಿಚಾರವಾಗಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಮ್ಮಿಹಾಳ ನಿವಾಸಿಯಾದ ಮೈಲಾರಿ ತಿರ್ಲಾಪುರ (39) ಮೃತ ದುರ್ದೈವಿ. ಮೈಲಾರಿಯ ಚಿಕ್ಕಪ್ಪನ ಮಗ ರವಿ ತಿರ್ಲಾಪುರ ಎಂಬುವವನೇ ಆಸ್ತಿ ವಿಚಾರವಾಗಿ ಅಣ್ಣನನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಲಾರಿಯನ್ನು ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಗೆ ತರಲಾಗಿತ್ತು. ಕುತ್ತಿಗೆ, ಬೆನ್ನಿನ ಭಾಗಕ್ಕೆ ಮಾರಣಾಂತಿಕ ಕೊಡಲಿ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ಮೈಲಾರಿ ಕೊನೆಯುಸಿರೆಳೆದಿದ್ದಾನೆ.
ಕಲಘಟಗಿ ಜಮ್ಮಿಹಾಳದಲ್ಲಿನ ಒಂದು ಎಕರೆ ಜಮೀನು ವಿಚಾರವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ರವಿಯ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.