ಕರ್ನಾಟಕ

karnataka

ETV Bharat / crime

ಮೊಬೈಲ್​ನಲ್ಲಿ ಆಟವಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ 10 ವರ್ಷದ ಬಾಲಕ ಆತ್ಮಹತ್ಯೆ - ತಾಯಿ ಮೊಬೈಲ್​ನಲ್ಲಿ ಆನ್​​​ಲೈನ್​ ಗೇಮ್​ ಆಡಲು ಬಿಡಲಿಲ್ಲ

ಲಖನೌದಲ್ಲಿ ಆಘಾತಕಾರಿ ಘಟನೆ - ಮೊಬೈಲ್​​ನಲ್ಲಿ ಆಟ ಆಡಲು ಬಿಡಲಿಲ್ಲ ಎಂದು 10 ವರ್ಷದ ಬಾಲಕ ಆತ್ಮಹತ್ಯೆ ಆರೋಪ

Stopped from using mobile, 10-year-old ends life
ಮೊಬೈಲ್​ನಲ್ಲಿ ಆಟವಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ 10 ವರ್ಷದ ಬಾಲಕ ಆತ್ಮಹತ್ಯೆ

By

Published : Dec 27, 2022, 7:47 AM IST

ಲಖನೌ: ಉತ್ತರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ತಾಯಿ ಮೊಬೈಲ್​ನಲ್ಲಿ ಆನ್​​​ಲೈನ್​ ಗೇಮ್​ ಆಡಲು ಬಿಡಲಿಲ್ಲ ಎಂದು ಆರೋಪಿಸಿ 10 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಚಾರ ಲಖನೌದಿಂದ ವರದಿಯಾಗಿದೆ. ಸೋಮವಾರ ತಡರಾತ್ರಿ ಹುಸೈಂಗಂಜ್ ಪ್ರದೇಶದ ಚಿತ್ವಾಪುರದಲ್ಲಿ ಈ ಘಟನೆ ನಡೆದಿದೆ.

10 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿಸಿ ಲಖನೌ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದವರ ಪ್ರಕಾರ, ಕಳೆದ ಕೆಲವು ದಿನಗಳಿಂದ ಬಾಲಕ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದ. ಮನೆಯಲ್ಲೇ ಇದ್ದು ಫೋನ್‌ನಲ್ಲಿ ಆಟ ಆಡುತ್ತಿದ್ದ ಎನ್ನಲಾಗಿದೆ. ಮನೆಯವರು ಹಲವು ಬಾರಿ ಮಗನ ಈ ವ್ಯಸನವನ್ನು ತಡೆಯಲು ಯತ್ನಿಸಿದ್ದರು.

ಸೋಮವಾರವೂ ಬಾಲಕನ ತಾಯಿ ಗದರಿಸಿ ಫೋನ್ ತೆಗೆದುಕೊಂಡು ಹೋಗಿದ್ದರು. ಅದರ ನಂತರ, ಹುಡುಗ ತನ್ನ ಸಹೋದರಿಯನ್ನು ಕೋಣೆಯಿಂದ ಹೊರಗೆ ಕಳುಹಿಸಿ ಬಾಗಿಲು ಮುಚ್ಚಿಕೊಂಡಿದ್ದ ಎನ್ನಲಾಗಿದೆ. ಸ್ವಲ್ಪ ಸಮಯದ ನಂತರ, ಮನೆಯವರು ಬಾಗಿಲು ತೆರೆಯುವಂತೆ ಕೇಳಿದ್ದಾರೆ. ಆದರೆ ಬಾಲಕ ಉತ್ತರಿಸದಿದ್ದಾಗ ಬಾಗಿಲು ಒಡೆದು ನೋಡಿದ್ದಾರೆ. ಅಲ್ಲಿ ಬಾಲಕ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ಈ ಕುರಿತು ಕೇಂದ್ರ ವಲಯದ ಡಿಸಿಪಿ ಅಪರ್ಣಾ ರಜತ್ ಮಾತನಾಡಿದ್ದು, ತಾಯಿ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಮಸಾಜ್‌ಗೆಂದು ಮಂಗಳಮುಖಿಯ ಮನೆಗೆ ಬಂದು 7 ಲಕ್ಷ ರೂ ದೋಚಿದ್ದ ಇಬ್ಬರ ಬಂಧನ

ABOUT THE AUTHOR

...view details