ಚಾಮರಾಜನಗರ: ಕಾಡುಪಾಪಗಳನ್ನು ಸಾಗಿಸುತ್ತಿದ್ದಾಗ ಇಬ್ಬರು ಖದೀಮರು ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ನಡೆದಿದೆ. ಹನೂರು ತಾಲೂಕಿನ ವೀರಭದ್ರಪ್ಪ (58) ಹಾಗೂ ಮೈಸೂರಿನ ದೊಡ್ಡಕಾನ್ಯ ಗ್ರಾಮದ ಪಿ.ರಾಜು(45) ಬಂಧಿತ ಆರೋಪಿಗಳು.
ಕಾಡುಪಾಪಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿದಳ ಪೊಲೀಸರು ದಾಳಿ ನಡೆಸಿ ಇವರಿಬ್ಬರನ್ನು ಬಂಧಿಸಿ ಮೂಕ ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಮಲೆಮಹದೇಶ್ವರ ವನ್ಯಜೀವಿ ವಿಭಾಗದಿಂದ ಈ ಪ್ರಾಣಿಗಳನ್ನು ಹನುರು ತಾಲೂಕಿನ ಆನೆಹೊಲ ನಿವಾಸಿ ಮಹದೇವ ಎಂಬಾತ ಸೆರೆಹಿಡಿದು ಇವರಿಗೆ ಕೊಟ್ಟಿದ್ದ ಎಂದು ತಿಳಿದುಬಂದಿದೆ.