ಬೆಳಗಾವಿ:ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಗತಿಯಲ್ಲಿದ್ದ ರಸ್ತೆ ನಡುವಿನಲ್ಲಿ ವಿಭಜಕ ಮಾಡಲು ನಿರ್ಮಿಸಲಾಗಿದ್ದ ಗುಂಡಿಯಲ್ಲಿ ಆಯಾತಪ್ಪಿ ಬಿದ್ದ ವೃದ್ಧನ ಕುತ್ತಿಗೆಯಲ್ಲಿ ಕಬ್ಬಿಣದ ಸಲಾಕೆ ಹೊಕ್ಕು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿಗಾಗಿ ತೆಗೆದಿರುವ ಗುಂಡಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಹಾಗೆಯೇ ಬಿಡಲಾಗಿತ್ತು.ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗುಂಡಿಯ ಸುತ್ತಲೂ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸದೇ ಇರುವ ಹಿನ್ನೆಲೆ ಆಯಾ ತಪ್ಪಿ ಗುಂಡಿಯಲ್ಲಿ ಬಿದ್ದಿರುವ ವೃದ್ಧನ ಕುತ್ತಿಗೆಯಲ್ಲಿ ಕಬ್ಬಿಣದ ಸಲಾಕೆ ಹೊಕ್ಕಿವೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.