ಕರ್ನಾಟಕ

karnataka

ಆಫ್ಘನ್ ಶಾಲೆಗಳ ಬಳಿ ಬಾಂಬ್ ಸ್ಫೋಟ: ಆರು ಮಂದಿ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

By

Published : Apr 19, 2022, 2:28 PM IST

ಅಫ್ಘಾನಿಸ್ತಾನದ ರಾಜಧಾನಿಯ ಕಾಬೂಲ್‌ನ ಪಶ್ಚಿಮದಲ್ಲಿರುವ ಶಾಲೆಗಳ ಬಳಿ ಸ್ಫೋಟ ಸಂಭವಿಸಿ, ಆರು ಮಂದಿ ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

Six people killed, dozens injured as 2 blasts hit near schools in afghanistan
ಆಫ್ಘನ್ ಶಾಲೆಗಳ ಬಳಿ ಬಾಂಬ್ ಸ್ಫೋಟ: ಆರು ಮಂದಿ ಮೃತ, 10ಕ್ಕೂ ಹೆಚ್ಚು ಮಂದಿ ಗಾಯ

ಕಾಬೂಲ್(ಅಫ್ಘಾನಿಸ್ತಾನ) :ಪಶ್ಚಿಮ ಕಾಬೂಲ್‌ನ ಶಾಲೆಗಳ ಬಳಿ ಬಾಂಬ್ ದಾಳಿ ನಡೆದಿದ್ದು ಆರು ಮಂದಿ ಸಾವನ್ನಪ್ಪಿ, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಪಶ್ಚಿಮ ಕಾಬೂಲ್‌ನ ಮುಮ್ತಾಜ್ ಶಾಲೆಯ ಬಳಿ ಮೊದಲ ಸ್ಫೋಟ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.

ರಾಜಧಾನಿಯ ಸಮೀಪದಲ್ಲಿರುವ ದಶ್ತ್-ಎ-ಬರ್ಚಿ ಜಿಲ್ಲೆಯ ಮತ್ತೊಂದು ಶಾಲೆಯ ಬಳಿ ಎರಡನೇ ಸ್ಫೋಟ ಸಂಭವಿಸಿದ್ದು, ಇಲ್ಲೂ ಕೂಡಾ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಮೂಲವೊಂದನ್ನು ಉಲ್ಲೇಖಿಸಿ, ಸ್ಪುಟ್ನಿಕ್‌ ವರದಿ ಮಾಡಿದೆ.

ಇತ್ತೀಚೆಗಷ್ಟೇ ಆಫ್ಘನ್​ನ ಖೋಸ್ಟ್ ಮತ್ತು ಕುನಾರ್ ಪ್ರಾಂತ್ಯಗಳ ಮೇಲೆ ಪಾಕ್ ವೈಮಾನಿಕ ದಾಳಿಯನ್ನು ನಡೆಸಿ ಸುಮಾರು 60 ನಾಗರಿಕರನ್ನು ಕೊಂದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಆಫ್ಘಾನಿಸ್ತಾನದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಹಾಗೂ ತಾಲಿಬಾನ್ ಸರ್ಕಾರದ ವಕ್ತಾರರಾದ ಜಬೀವುಲ್ಲಾ ಮುಜಾಹಿದ್, ಪಾಕಿಸ್ತಾನವು ಆಫ್ಘಾನಿಸ್ತಾನದ ಜನರ ತಾಳ್ಮೆಯನ್ನು ಪರೀಕ್ಷಿಸಬಾರದು. ಒಂದು ವೇಳೆ ತಾಳ್ಮೆಯನ್ನು ಪರೀಕ್ಷಿಸಲು ಮುಂದಾದರೆ, ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:'ಆಫ್ಘನ್ನರ ತಾಳ್ಮೆ ಪರೀಕ್ಷಿಸಬೇಡಿ': ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ಕೊಟ್ಟ ತಾಲಿಬಾನ್

ABOUT THE AUTHOR

...view details